ಅದಾನಿ ಸಂಸ್ಥೆಗಳಿಗೆ ನೀಡಿದ ಸಾಲಗಳ ಬಗ್ಗೆ ಮಾಹಿತಿ ಕೋರಿದ ಆರ್‌ಬಿಐ: ವರದಿ

Update: 2023-02-02 08:35 GMT

ಹೊಸದಿಲ್ಲಿ: ಅದಾನಿ ಸಮೂಹ ಸಂಸ್ಥೆಗಳಿಗೆ ನೀಡಿದ ಸಾಲಗಳ ಕುರಿತಂತೆ ಭಾರತೀಯ ಬ್ಯಾಂಕ್‌ಗಳಿಂದ ರಿಸರ್ವ್‌ ಬ್ಯಾಂಕ್‌ ಮಾಹಿತಿ ಕೇಳಿದೆ ಎಂದು ವರದಿಯಾಗಿದೆ.

"ನಡೆದಿರುವ ಹೊಸ ಬೆಳವಣಿಗೆಗಳ" ಹಿನ್ನೆಲೆಯಲ್ಲಿ ನಿಗದಿತ ಮಾರ್ಗಸೂಚಿಯಾನುಸಾರ ಈ ಮಾಹಿತಿಯನ್ನು ಆರ್‌ಬಿಐ ಕೇಳಿರಬಹುದೆಂದು ಮೂಲಗಳು ತಿಳಿಸಿವೆ.

ಲೆಕ್ಕಪತ್ರ ಅವ್ಯವಹಾರ ಮತ್ತು ಷೇರು ಮೌಲ್ಯ ತಿರುಚುವಿಕೆಯಲ್ಲಿ ಅದಾನಿ ಸಮೂಹ ಭಾಗಿಯಾಗಿದೆ ಎಂಬ ಅಮೆರಿಕಾದ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ವರದಿಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಸೆಂಟ್ರಲ್‌ ಡೇಟಾಬೇಸ್‌ಗಳಲ್ಲಿ ಲೇಟೆಸ್ಟ್‌ ಮಾಹಿತಿಯಿಲ್ಲದೇ ಇರುವುದರಿಂದ ರಿಸರ್ವ್‌ ಬ್ಯಾಂಕ್‌ ಈ ಮಾಹಿತಿ ಕೋರಿರಬಹುದೆಂದು ಊಸಹಿಸಲಾಗಿದೆ. ಅದಾನಿ ಸಂಸ್ಥೆಗಳ ಷೇರು ಮೌಲ್ಯಗಳ ಕುಸಿತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸೆಬಿ ಅವಲೋಕಿಸುತ್ತಿದೆ ಎಂದು  ವರದಿಗಳು ತಿಳಿಸಿವೆ.

Similar News