ಫೆ.5ರಂದು ಇಂದಿರಾ ಟ್ರೋಫಿ-2023 'ಕ್ರಿಕೆಟ್ ಉತ್ಸವ'

Update: 2023-02-02 10:09 GMT

ಮಂಗಳೂರು, ಫೆ.2: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಹಾಗೂ ಸುರತ್ಕಲ್ ಬ್ಲಾಕ್ ಯುವ ಕಾಂಗ್ರೆಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಬೊಂದೇಲ್‌ನಲ್ಲಿ ಫೆ.5ರಂದು 'ಇಂದಿರಾ ಟ್ರೋಫಿ-2023 ಕ್ರಿಕೆಟ್ ಉತ್ಸವ'ವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಸದಾಶಿವ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ಬ್ಲಾಕ್‌ಗೆ ಒಳಪಟ್ಟಿರುವ 23 ವಾರ್ಡುಗಳಿಗೆ ಪಂದ್ಯ ಸೀಮಿತವಾಗಿದೆ. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೂಡಾ ಹಮ್ಮಿಕೊಳ್ಳಲಾಗಿದೆ ಮಾಹಿತಿ ನೀಡಿದರು.

ಕ್ರಿಕೆಟ್‌ನಲ್ಲಿ ಚಾಂಪಿಯನ್ ತಂಡಕ್ಕೆ 50 ಸಾವಿರ ರೂ. ನಗದು ಮತ್ತು ಇಂದಿರಾ ಟ್ರೋಫಿ , ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 25 ಸಾವಿರ ರೂ. ನಗದು ಮತ್ತು ಇಂದಿರಾ ಟ್ರೋಫಿ ನೀಡಲಾಗುವುದು ಎಂದರು.

 ಸುದ್ದಿಗೋಷ್ಠಿಯಲ್ಲಿ ಸುರತ್ಕಲ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜೈಸನ್ ,ಬ್ಲಾಕ್ ಕಾಂಗ್ರೆಸ್ ಧುರೀಣರಾದ ರಹ್ಮಾನ್ ಖಾನ್ ಕುಂಜತ್ತಬೈಲು, ಮಲ್ಲಿಕಾರ್ಜುನ ಎಂ. ಕೋಡಿಕಲ್, ಜಲೀಲ್ ಬದ್ರಿಯಾ ಉಪಸ್ಥಿತರಿದ್ದರು.

Similar News