ಕಾರ್ಖಾನೆಯಲ್ಲಿ ದುರಂತ: ಕೇಂದ್ರ, ರಾಜ್ಯಗಳಿಗೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2023-02-02 15:18 GMT

ಹೊಸದಿಲ್ಲಿ, ಫೆ. 2: ಕಾರ್ಖಾನೆಗಳಲ್ಲಿ ಸಂಭವಿಸುವ ದುರಂತಗಳಲ್ಲಿ ಕಾರ್ಮಿಕರು ಸಾವನ್ನಪ್ಪುವ ಹಾಗೂ ಗಾಯಗೊಳ್ಳುವುದಕ್ಕೆ ಸಂಬಂಧಿಸಿ ವಿಸ್ತೃತ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸು ಜಾರಿ ಮಾಡಿದೆ. 

ದೇಶದ ನೋಂದಾಯಿತ ಕಾರ್ಖಾನೆಗಳಲ್ಲಿ 2017 ಹಾಗೂ 2022ರ ನಡುವೆ ನಡೆದ ದುರಂತಗಳಲ್ಲಿ ಪ್ರತಿ ದಿನ ಸರಾಸರಿ 3 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 11 ಮಂದಿ ಗಾಯಗೊಂಡಿದ್ದಾರೆ ಎಂದು ಇಂಡಿಯಾ ಸ್ಪೆಂಡ್ ನ ಇತ್ತೀಚೆಗಿನ ವರದಿ ಬಹಿರಂಗಗೊಳಿಸಿದ ಬಳಿಕ ಎನ್‌ಎಚ್‌ಆರ್‌ಸಿ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದೆ. ಇಂಡಿಯಾ ಸ್ಪೆಂಡ್ ನ ವರದಿ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗಗಳ ಕಾರ್ಖಾನೆ ಸಲಹಾ ಸೇವೆ ಹಾಗೂ ಕಾರ್ಮಿಕ ಸಂಸ್ಧೆಗಳ ಪ್ರಧಾನ ನಿರ್ದೇಶನಾಲಯದ ದತ್ತಾಂಶ (DGFASLI) ವನ್ನು ಉಲ್ಲೇಖಿಸಿದೆ. 

ಡಿಜಿಎಫ್ಎಎಸ್ಎಲ್ಐ ದತ್ತಾಂಶದ ಪ್ರಕಾರ 2018 ಹಾಗೂ 2020ರ ನಡುವೆ 3,331 ಸಾವುಗಳು ದಾಖಲಾಗಿವೆ. ಆದರೆ, 1948ರ ಕಾರ್ಖಾನೆ ಕಾಯ್ದೆ ಅಡಿಯಲ್ಲಿ ಕೇವಲ 14 ಮಂದಿಗೆ ಮಾತ್ರ ಜೈಲು ಶಿಕ್ಷೆಯಾಗಿದೆ. 

Similar News