​ಇಟಲಿ ಬಳಿ ನೌಕೆಯಲ್ಲಿದ್ದ 40 ವಲಸಿಗರ ರಕ್ಷಣೆ: 8 ಮಂದಿ ಮೃತ್ಯು

Update: 2023-02-03 17:56 GMT

ರೋಮ್, ಫೆ.3: ಇಟಲಿಯ ಸಿಸಿಲಿ ಪ್ರಾಂತದ ದಕ್ಷಿಣದಲ್ಲಿರುವ  ಲ್ಯಾಂಪೆಡುಸಾ ದ್ವೀಪದ ಬಳಿ ಅತಂತ್ರ ಸ್ಥಿತಿಯಲ್ಲಿದ್ದ ನೌಕೆಯಲ್ಲಿದ್ದ ಸುಮಾರು 40 ವಲಸಿಗರನ್ನು ರಕ್ಷಣಾ ಪಡೆ ರಕ್ಷಿಸಿದೆ. ನೌಕೆಯಲ್ಲಿ 8 ವಲಸಿಗರು ಮೃತಪಟ್ಟ ಸ್ಥಿತಿಯಲ್ಲಿದ್ದರು  ಎಂದು ಎಎನ್ಎಸ್ಎ ಸುದ್ಧಿಸಂಸ್ಥೆ ವರದಿ ಮಾಡಿದೆ.

ಯುರೋಪ್  ಸಮುದ್ರ ಮಾರ್ಗದಲ್ಲಿ ಸಂಪರ್ಕ ಕಲ್ಪಿಸುವ ಪ್ರಮುಖ ಜಲಸಂಧಿಯಾಗಿರುವ ಲ್ಯಾಂಪೆಡುಸಾದ ಬಳಿ ಮತ್ತೆ ಮೂರು ನೌಕೆಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಮಾಹಿತಿಯ ಬಳಿಕ ನಡೆಸಿದ ಕಾರ್ಯಾಚರಣೆಯಲ್ಲಿ ಮೂರೂ ನೌಕೆಗಳನ್ನು ಸುರಕ್ಷಿತವಾಗಿ ದಡ ಸೇರಿಸಲಾಗಿದ್ದು ಅದರಲ್ಲಿದ್ದ ಒಟ್ಟು 156 ಜನರು ಸುರಕ್ಷಿತವಾಗಿದ್ದಾರೆ ಎಂದು ಇಟಲಿಯ ಅಧಿಕಾರಿಗಳು ಹೇಳಿದ್ದಾರೆ.

ಸಮುದ್ರಮಾರ್ಗದ ಮೂಲಕ 2022ರಲ್ಲಿ ಸುಮಾರು 1,05,140 ವಲಸಿಗರು ಇಟಲಿಯನ್ನು ತಲುಪಿದ್ದಾರೆ ಎಂದು ಆಂತರಿಕ ಸಚಿವಾಲಯದ ಅಂಕಿಅಂಶ ತಿಳಿಸಿದೆ.

Similar News