ವಿಶೇಷ ಕಾರ್ಯಾಚರಣೆಗಾಗಿ 850 ನ್ಯಾನೊ ಡ್ರೋನ್ ಗಳಿಗೆ ಸೇನೆ ಬೇಡಿಕೆ

Update: 2023-02-04 02:37 GMT

ಹೊಸದಿಲ್ಲಿ: ಚೀನಾ ಜತೆಗಿನ ಉತ್ತರ ಗಡಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಮತ್ತು ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ ಉದ್ದೇಶಕ್ಕಾಗಿ ತ್ವರಿತ ಪ್ರಕ್ರಿಯೆ ಮೂಲಕ 850 ಸ್ವದೇಶಿ ನ್ಯಾನೊ ಡ್ರೋನ್ ಗಳ ಖರೀದಿಗೆ ಭಾರತೀಯ ಸೇನೆ ಪ್ರಸ್ತಾವನೆ ಮುಂದಿಟ್ಟಿದೆ.

ಮುಂದಿನ ಕೆಲ ತಿಂಗಳುಗಳಲ್ಲಿ ವಿವಿಧ ಬಗೆಯ  ಡ್ರೋನ್ ಗಳ ತುರ್ತು ಖರೀದಿಗಾಗಿ ಮನವಿಯನ್ನು ಸಲ್ಲಿಸಲಾಗಿದೆ. ಚೀನಾ ಜತೆಗಿನ 33 ತಿಂಗಳ ಸೇನಾ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ, ವಿಶೇಷ ಕಾರ್ಯಾಚರಣೆಗಾಗಿ 850 ನ್ಯಾನೊ ಡ್ರೋನ್ ಗಳಿಗೆ ಸೇನೆ ಬೇಡಿಕೆಗಳ ಕಾರ್ಯಾಚರಣೆಯ ಅಗತ್ಯತೆಯನ್ನು ಪ್ರತಿಪಾದಿಸಲಾಗಿದೆ. ಅಮೆರಿಕ- ಅಜೆರ್‍ಬೈಜಾನ್ ಸಂಘರ್ಷದಿಂದ ಹಿಡಿದು ರಷ್ಯಾ-ಉಕ್ರೇನ್ ಯುದ್ಧದ ವರೆಗೆ ಡ್ರೋನ್ ಬಳಕೆ ವ್ಯಾಪಕವಾಗಿ ಆಗಿದೆ.

ಉದ್ದೇಶಿತ ಗುರಿ ಮಾಡುವ ಪ್ರದೇಶಗಳಿಗೆ ಸಂಭಾವ್ಯ ಅಪಾಯವನ್ನು ತಡೆಯಲು ವಿಸ್ತಂತ ಪರಿಸ್ಥಿತಿ ಜಾಗೃತಿ ಅಗತ್ಯವಿರುವ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಕಾರ್ಯಾಚರಣೆ, ಭಯೋತ್ಪಾದಕ ತಡೆ ಕಾರ್ಯಾಚರಣೆ ಹಾಗೂ ತುರ್ತು ಕಾರ್ಯಾಚರಣೆ ಹೊಣೆಯನ್ನು ಸೇನೆಗೆ ವಹಿಸಲಾಗಿದೆ.

Similar News