ಸಿಖ್ ಸೈನಿಕರಿಗೆ ಹೆಲ್ಮೆಟ್: ಗುರುದ್ವಾರ ಪರ್ಬಂಧಕ್ ಸಮಿತಿ ತೀವ್ರ ವಿರೋಧ

Update: 2023-02-04 05:46 GMT

ಅಮೃತಸರ: ಸಿಖ್ ಸೈನಿಕರಿಗೆ ಬ್ಯಾಲಿಸ್ಟಿಕ್ ಹೆಲ್ಮೆಟ್‌ಗಳನ್ನು ಪರಿಚಯಿಸುವ ಯಾವುದೇ ಕ್ರಮವನ್ನು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು ತೀವ್ರವಾಗಿ ವಿರೋಧಿಸಿದೆ.

ಸಿಖ್ಖರ ಅತ್ಯುನ್ನತ ಧಾರ್ಮಿಕ ಸಂಸ್ಥೆಯಾದ ಎಸ್ ಜಿಪಿಸಿಯ ನಿಯೋಗವು ಈ ವಿಚಾರವನ್ನು ಚರ್ಚಿಸಲು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ (NCM) ಮುಖ್ಯಸ್ಥರನ್ನು ಭೇಟಿ ಮಾಡಿತು.

ಸಿಖ್ ಗುರುತಿನ ವಿಷಯದಲ್ಲಿ ಯಾವುದೇ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಎಸ್‌ಜಿಪಿಸಿ ನಿಯೋಗ ಹೇಳಿದೆ. ಆದ್ದರಿಂದ ಸಿಖ್ ಸೈನಿಕರು ಯಾವುದೇ ಸಂದರ್ಭದಲ್ಲೂ ಹೆಲ್ಮೆಟ್‌ಗಳನ್ನು ಸ್ವೀಕರಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಸಿಖ್ ಸೈನಿಕರಿಗೆ ಬ್ಯಾಲಿಸ್ಟಿಕ್ ಹೆಲ್ಮೆಟ್‌ಗಳನ್ನು ಪರಿಚಯಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ.

SGPC ನಿಯೋಗವು ಶುಕ್ರವಾರ ಹೊಸದಿಲ್ಲಿ ಯ NCM ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿತು. ನಿಯೋಗದಲ್ಲಿ ಎಸ್‌ಜಿಪಿಸಿ ಪ್ರಧಾನ ಕಾರ್ಯದರ್ಶಿ ಗುರ್ಚರಣ್ ಸಿಂಗ್ ಗ್ರೆವಾಲ್ ಮತ್ತು ಸದಸ್ಯ ರಘಬೀರ್ ಸಿಂಗ್ ಸಹರಾನ್ ಮಜ್ರಾ ಇದ್ದರು.

ಸಿಖ್ ಸೈನಿಕರು ಹೆಲ್ಮೆಟ್ ಧರಿಸುವಂತೆ ಸರಕಾರದ ವರದಿಯ ಪ್ರಸ್ತಾವನೆಗೆ ಎನ್‌ಸಿಎಂ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್‌ಪುರ ಅವರ ಮುಂದೆ ತೀವ್ರ ಆಕ್ಷೇಪಣೆಯನ್ನು ದಾಖಲಿಸಿತು ಹಾಗೂ  ಈ ವಿಷಯದ ಬಗ್ಗೆ ಯಾವುದೇ ಚರ್ಚೆ ಅಥವಾ ತರ್ಕವನ್ನು ನಡೆಸಲಾಗುವುದಿಲ್ಲ ಎಂದು ತಿಳಿಸಿತು.

Similar News