ಮುಖ್ಯಮಂತ್ರಿ ವಿಜಯನ್ ಅವರ ಅತಿಥಿ ಗೃಹದ ಹೊರಗೆ ಕೇರಳ ಯುವ ಕಾಂಗ್ರೆಸ್ ಸದಸ್ಯರಿಂದ ಕಪ್ಪು ಬಾವುಟ ಪ್ರದರ್ಶನ

Update: 2023-02-04 09:28 GMT

ಕೊಚ್ಚಿ: ಮುಂದಿನ ಆರ್ಥಿಕ ವರ್ಷದ ರಾಜ್ಯ ಬಜೆಟ್  ವಿರೋಧಿಸಿ ಕೇರಳದ ಯುವ ಕಾಂಗ್ರೆಸ್ ಸದಸ್ಯರು ಕೊಚ್ಚಿಯಲ್ಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅತಿಥಿ ಗೃಹದ ಮುಂದೆ ಶನಿವಾರ ಕಪ್ಪು ಬಾವುಟ ಪ್ರದರ್ಶಿಸಿದರು

ಪ್ರತಿಭಟನೆಯ ಹಿನ್ನೆಲೆಯಲ್ಲಿ ಅತಿಥಿ ಗೃಹದ ಹೊರಗೆ ಈಗಾಗಲೇ ಭದ್ರತೆಯನ್ನು ಹೆಚ್ಚಿಸಿದ್ದರಿಂದ ಪ್ರತಿಭಟನಾಕಾರರನ್ನು ತಕ್ಷಣವೇ ಬಂಧಿಸಲಾಯಿತು.

ರಾಜ್ಯ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ಶುಕ್ರವಾರ ವಿಧಾನಸಭೆಯಲ್ಲಿ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ನಂತರ, ಪ್ರತಿಪಕ್ಷ ಯುವ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ಕಾರ್ಯಕರ್ತರು ತಿರುವನಂತಪುರಂನಲ್ಲಿರುವ ರಾಜ್ಯ ಸಚಿವಾಲಯದ ಹೊರಗೆ ಪ್ರತಿಭಟನೆ ನಡೆಸಿದ್ದರು. ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಬಜೆಟ್ ಘೋಷಣೆಗೆ ಸಂಬಂಧಿಸಿದಂತೆ ಪಿಣರಾಯಿ ವಿಜಯನ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂಧನ, ಮದ್ಯ, ಬೈಕ್ ಹಾಗೂ  ವಿದ್ಯುತ್ ಮಾರಾಟದ ಮೇಲೆ 'ಸಾಮಾಜಿಕ ಭದ್ರತಾ ಸೆಸ್' ಅನ್ನು ಸರಕಾರ ಪ್ರಸ್ತಾಪಿಸಿದೆ. ಇದು ಮುಂದಿನ ಆರ್ಥಿಕ ವರ್ಷದಲ್ಲಿ ಬೆಲೆಯನ್ನು ಹೆಚ್ಚಿಸಲಿದೆ. ಹೆಚ್ಚುವರಿ ಆದಾಯವನ್ನು ಗಳಿಸುವ ಉದ್ದೇಶ ಹೊಂದಿದ್ದೇವೆ  ಎಂದು ಹೇಳುವ ಮೂಲಕ ಸೆಸ್ ವಿಧಿಸುವ ಸರಕಾರದ ನಿರ್ಧಾರವನ್ನು ಬಾಲಗೋಪಾಲ್ ಸಮರ್ಥಿಸಿಕೊಂಡಿದ್ದಾರೆ.

Similar News