ಹರ್ಯಾಣ, ಪಶ್ಚಿಮ ಉ.ಪ್ರ.ದಲ್ಲಿ ಭೂಕಂಪನ‌

Update: 2023-02-04 15:58 GMT

ಚಂಡೀಗಢ,ಫೆ.4: ಹರ್ಯಾಣ (Haryana) ಹಾಗೂ ಪಶ್ಚಿಮ ಉತ್ತರಪ್ರದೇಶದ (Uttar Pradesh) ವಿವಿಧ ಭಾಗಗಳಲ್ಲಿ ಶುಕ್ರವಾರ ಲಘುಭೂಕಂಪನ ಸಂಭವಿಸಿದೆ. ಭೂಕಂಪದ (Earthquake) ತೀವ್ರತೆ ರಿಕ್ಟರ್ ಮಾಪಕದಲ್ಲಿ 3.2ರಷ್ಟು ದಾಖಲಾಗಿದ್ದು, ಪಶ್ಚಿಮ ಉತ್ತರಪ್ರದೇಶದ ಶಾಮ್ಲಿಯಲ್ಲಿ ಅದರ ಕೇಂದ್ರಬಿಂದುವಿತ್ತು. ಶುಕ್ರವಾರ ರಾತ್ರಿ9:31ರ ವೇಳೆಗೆ ಭೂಮಿಯಿದ 5 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದ್ದಾಗಿ ರಾಷ್ಟ್ರೀಯ ಭೂಕಂಪಶಸ್ತ್ರ ಕೇಂದ್ರವು ತಿಳಿಸಿದೆ.

ಭೂಕಂಪನದಲ್ಲಿ ಯಾವುದೇ ಪ್ರಾಣ ಹಾನಿ, ಆಸ್ತಿಪಾಸ್ತಿ ನಷ್ಟದ ಪ್ರಕರಣವಾಗಲಿ ವರದಿಯಾಗಿಲ್ಲವೆಂದು ಮೂಲಗಳು ತಿಳಿಸಿವೆ.

Similar News