ತಮಿಳುನಾಡು: ಬಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಕಾಲ್ತುಳಿತ, ನಾಲ್ವರು ಮಹಿಳೆಯರ ಸಾವು

Update: 2023-02-04 16:57 GMT

ಚೆನ್ನೈ, ಫೆ.4: ತಮಿಳುನಾಡಿನ (Tamil Nadu) ತಿರುಪತ್ತೂರಿನ (Tiruppattur) ವಾಣಿಯಂಬಾಡಿಯಲ್ಲಿ ಶನಿವಾರ ಬಟ್ಟೆ (clothes) ವಿತರಣೆ ಕಾರ್ಯಕ್ರಮದಲ್ಲಿ ನೂಕುನುಗ್ಗಲಿನಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು (women) ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಥೈಪುಸಂ ಉತ್ಸವದ (Thaipusam festival) ಸಂದರ್ಭದಲ್ಲಿ ಕೆಲವರು ವಿತರಿಸುತ್ತಿದ್ದ ಧೋತಿಗಳು ಮತ್ತು ಸೀರೆಗಳಿಗಾಗಿ ಟೋಕನ್ಗಳನ್ನು ಪಡೆಯಲು ಸ್ಥಳೀಯ ನಿವಾಸಿಗಳು ಭಾರೀ ಸಂಖ್ಯೆಯಲ್ಲಿ ನೆರೆದಿದ್ದು,ಈ ಸಂದರ್ಭ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿದೆ.

ಶಿವ-ಪಾರ್ವತಿಯರ ಕಿರಿಯ ಪುತ್ರ ಶ್ರೀ ಮುರುಗನ್ ಅಥವಾ ಶ್ರೀ ಕಾರ್ತಿಕೇಯನ ಜನ್ಮದಿನದ ಅಂಗವಾಗಿ ತಮಿಳು ಸಮುದಾಯವು ಥೈಪುಸಂ ಉತ್ಸವವನ್ನು ಭಾರೀ ಸಂಭ್ರಮದೊಂದಿಗೆ ಆಚರಿಸುತ್ತದೆ. ಕಾರ್ಯಕ್ರಮಕ್ಕೆ ಅನುಮತಿಯನ್ನು ಪಡೆದುಕೊಂಡಿರಲಿಲ್ಲ ಎಂದು ತಿಳಿಸಿದ ತಿರುಪತ್ತೂರ್ ಎಸ್ಪಿ,ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೃತ ಮಹಿಳೆಯರ ಕುಟುಂಬಗಳಿಗೆ ತಲಾ ಎರಡು ಲ.ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.

Similar News