ವಿಶ್ವ ‘ಸ್ಟಾರ್ಟ್-ಅಪ್’ ಪರಿಸರ ವ್ಯವಸ್ಥೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ: ಕೇಂದ್ರ ಸಚಿವ ಠಾಕೂರ್

Update: 2023-02-05 15:36 GMT

ಜಮ್ಮು,ಫೆ.5: ಭಾರತವು ಇಂದು ವಿಶ್ವದಲ್ಲಿ ‘ಸ್ಟಾರ್ಟ್-ಅಪ್ (ನವೋದ್ಯಮ)’ಪರಿಸರ ವ್ಯವಸ್ಥೆಯ ಕೇಂದ್ರವಾಗಿದ್ದು,90,000 ನವೋದ್ಯಮಗಳು ಮತ್ತು 30 ಶತಕೋಟಿ ಡಾ.ಗಳ ಯುನಿಕಾರ್ನ್ ಕಂಪನಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ,ಯುವ ವ್ಯವಹಾರಗಳು ಮತ್ತು ಕ್ರೀೀಡಾ ಸಚಿವ ಅನುರಾಗ ಠಾಕೂರ್(Anurag Thakur) ಹೇಳಿದ್ದಾರೆ.

ಶನಿವಾರ ಜಮ್ಮು ವಿವಿಯಲ್ಲಿ ಆಯೋಜಿಸಲಾಗಿದ್ದ 36ನೇ ಅಂತರ್ ವಿವಿ ಉತ್ತರ ವಲಯ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಠಾಕೂರ್,ಭಾರತವು ಶ್ರೀಮಂತ ಸಂಸ್ಕೃತಿ,ಕಲೆ ಮತ್ತು ಸಂಪ್ರದಾಯಗಳ ಶ್ರೇಷ್ಠ ಇತಿಹಾಸವನ್ನು ಹೊಂದಿದೆ. ವಿಶ್ವದ ಬೇರೆಲ್ಲಿಯೂ ಕಾಣಸಿಗದ ಈ ಸಂಸ್ಕೃತಿ,ಕಲೆ ಮತ್ತು ಸಂಪ್ರದಾಯವನ್ನು ರಕ್ಷಿಸುವ ಗುರುತರ ಜವಾಬ್ದಾರಿ ಈ ದೇಶದ ಯುವಜನರದ್ದಾಗಿದೆ ಎಂದರು.

ಒಂದು ವಾರ ಕಾಲ ನಡೆದ ಯುವಜನೋತ್ಸವದಲ್ಲಿ ದೇಶಾದ್ಯಂತದ 18 ವಿವಿಗಳ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Similar News