ದ್ವೇಷಭಾಷಣ ಆರೋಪ: ರಾಮದೇವ್ ವಿರುದ್ಧ ಎಫ್ಐಆರ್ ದಾಖಲು
Update: 2023-02-05 21:47 IST
ಬಾರ್ಮೇರ್ (ರಾಜಸ್ಥಾನ),ಫೆ.5: ಬಾರ್ಮೇರ್ ಜಿಲ್ಲೆಯಲ್ಲಿ ನಡೆದಿದ್ದ ಸಂತರ ಸಮಾವೇಶದಲ್ಲಿ ತನ್ನ ಪ್ರಚೋದನಾತ್ಮಕ ಹೇಳಿಕೆಗಳಿಂದ ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಕ್ಕಾಗಿ ಯೋಗಗುರು ರಾಮದೇವ್(Ramdev) ವಿರುದ್ಧ ಚೌಹಟಾನ್ ಪೊಲೀಸರು ರವಿವಾರ ಎಫ್ಐಆರ್ ದಾಖಲಿಸಿದ್ದಾರೆ. ಸ್ಥಳೀಯ ನಿವಾಸಿ ಪಠಾಯಿ ಖಾನ್ (Pathai Khan)ಎನ್ನುವವರು ಈ ಬಗ್ಗೆ ದೂರು ಸಲ್ಲಿಸಿದ್ದರು.
ಫೆ.2ರಂದು ನಡೆದಿದ್ದ ಸಂತರ ಸಮಾವೇಶದಲ್ಲಿ ರಾಮದೇವ್ ಹಿಂದು ಧರ್ಮವನ್ನು ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಗಳಿಗೆ ಹೋಲಿಸುತ್ತ,ಮುಸ್ಲಿಮರು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಮತ್ತು ಹಿಂದು ಮಹಿಳೆಯರನ್ನು ಅಪಹರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅವೆರಡು ಧರ್ಮಗಳು ಮತಾಂತರದ ಗೀಳು ಹೊಂದಿದ್ದರೆ,ಹಿಂದು ಧರ್ಮವು ಒಳ್ಳೆಯದನ್ನು ಮಾಡುವಂತೆ ತನ್ನ ಅನುಯಾಯಿಗಳಿಗೆ ಬೋಧಿಸಿದೆ ಎಂದೂ ರಾಮದೇವ್ ಹೇಳಿದ್ದರೆನ್ನಲಾಗಿದೆ.