ಭಾರತ-ಬ್ರಿಟನ್ ಎನ್ಎಸ್ಎ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ರಿಶಿ ಸುನಕ್!

Update: 2023-02-05 17:44 GMT

ದೋವಲ್ ಹಾಗೂ ಅವರ ಬ್ರಿಟನ್ ಸಹವರ್ತಿ ಟಿಮ್ ಬ್ಯಾರೊವ್ ನಡುವೆ ಶನಿವಾರ ನಡೆದ ಬ್ರಿಟಿಷ್ ಸಂಪುಟ ಕಾರ್ಯಾಲಯದ ಸಭೆಯಲ್ಲಿ ಬ್ರಿಟನ್ ಪ್ರಧಾನಿ ರಿಶಿ ಸುನಕ್ ಪಾಲ್ಗೊಳ್ಳುವ ಮೂಲಕ ವಿಶಿಷ್ಟ ನಡೆಯನ್ನು ಅನುಸರಿಸಿದರು.

ವ್ಯಾಪಾರ, ರಕ್ಷಣೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗಾಢವಾಗುತ್ತಿರುವ ಆಯಕಟ್ಟಿನ ಪಾಲುದಾರಿಕೆಗಳಿಗೆ ಬ್ರಿಟನ್ ಸರಕಾರದ ಬೆಂಬಲದ ಬಗ್ಗೆ ಸುನಕ್ ಮಾತುಕತೆಯ ವೇಳೆ ಬೆಳಕು ಚೆಲ್ಲಿದರು.

ಅಮೆರಿಕದ ಭದ್ರತಾಸಲಹೆಗಾರ ಜಾಕ್‌ಸುಲಿವಾನ್ ಅವರನ್ನು ಭೇಟಿಯಾದ ಬಳಿಕ ವಾಶಿಂಗ್ಟನ್‌ನಿಂದ ಮರಳಿರುವ ಧೋವಲ್ ಅವರು ಲಂಡನ್‌ಗೆ ಆಗಮಿಸಿದ್ದು, ವಾರ್ಷಿಕ ದ್ವಿಪಕ್ಷೀಯ ವ್ಯೆಹಾತ್ಮಕ ಮಾತುಕತೆಗಳಲ್ಲಿ ಪಾಲ್ಗೊಂಡರು.

ಸರ್‌ಟಿಮ್ ಬ್ಯಾರೊ ಹಾಗೂ ಧೋವಲ್ ನಡುವೆ ನಡೆದ ಭಾರತ-ಬ್ರಿಟನ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಧಾನಿ ರಿಶಿ ಸುನಕ್ ಅವರು ವಿಶಿಷ್ಟ ಕ್ರಮವನ್ನು ಅನುಸರಿಸಿದ್ದಾರೆಂದು ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯ ಶನಿವಾರ ಟ್ವೀಟ್ ಮಾಡಿದೆ.

ವ್ಯಾಪಾರ, ರಕ್ಷಣೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯೆಹಾತ್ಮಕ ಪಾಲುದಾರಿಕೆಯನ್ನು ಭದ್ರಗೊಳಿಸಲು ಭಾರತಕ್ಕೆ ತನ್ನ ಸರಕಾರದ ಬೆಂಬಲದ ಬಗ್ಗೆ ಬ್ರಿಟನ್ ಪ್ರಧಾನಿ ಭರವಸೆ ನೀಡಿರುವುದು ಮಹತ್ವದ್ದಾಗಿದೆ. ಶೀಘ್ರದಲ್ಲೇ ಭಾರತಕ್ಕೆ ಸರ್ ಟಿಮ್ ಅವರ ಭೇಟಿಯನ್ನು ಎದುರು ನೋಡುತ್ತಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಟ್ವೀಟಿಸಿದೆ.

Similar News