ಕ್ಲಿನಿಕ್‌ನಲ್ಲಿ ತಪ್ಪು ಚುಚ್ದು ಮದ್ದು ನೀಡಿದ್ದರಿಂದ ಮಹಿಳೆ ಮೃತ್ಯು: ಆರೋಪಿಯ ಬಂಧನ

Update: 2023-02-06 10:22 GMT

ಭದೋಹಿ (ಉತ್ತರಪ್ರದೇಶ): 'ತಪ್ಪು' ಚುಚ್ಚು ಮದ್ದನ್ನು ನೀಡಿದ್ದರಿಂದ 48 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಯಿರೌನಾ ಪೊಲೀಸ್ ಠಾಣಾ ವ್ಯಾಪ್ತಿಯ ಸೆಮ್ರಾದ್ ಪ್ರದೇಶದ ಕ್ಲಿನಿಕ್‌ನಲ್ಲಿ ತಪ್ಪಾದ ಚುಚ್ಚುಮದ್ದನ್ನು ನೀಡಿದ ನಂತರ ಮಹಿಳೆ ಶುಕ್ರವಾರ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜನ್ ವಿಶ್ವಕರ್ಮ ಎಂಬಾತನ ಬಳಿಗೆ ಹೋಗಿದ್ದ 48 ವರ್ಷದ ಪಟ್ಟಿ ದೇವಿ ಅವರಿಗೆ  ಚುಚ್ಚುಮದ್ದು ನೀಡಿದ  ನಂತರ ಅವರು  ಸಾವನ್ನಪ್ಪಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದ ಸದಸ್ಯರು ನೀಡಿದ ದೂರನ್ನು ಉಲ್ಲೇಖಿಸಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಬ್ರಿಜೇಶ್ ಕುಮಾರ್ ಮೌರ್ಯ ಅವರು ಹೇಳಿದರು.

Similar News