ಫೆ.8ರಂದು ಪ್ರಸಾದ್ ನೇತ್ರಾಲಯದಲ್ಲಿ ಕಣ್ಣಿನ ನೂತನ ಸೌಲಭ್ಯ ಉದ್ಘಾಟನೆ

Update: 2023-02-06 14:34 GMT

ಮಂಗಳೂರು: ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನೂತನ ಚಿಕಿತ್ಸಾಸೌಲಭ್ಯಗಳ ವಿಭಾಗಗಳನ್ನು ತೆರೆಯಲಾಗಿದ್ದು, ಇದರ ಉದ್ಘಾಟನೆ ಫೆ.8ರಂದು ಮಧ್ಯಾಹ್ನ 12.30ಕ್ಕೆ ಮಂಗಳೂರಿನ ಉಜ್ಜೋಡಿ-ಪಂಪ್‌ವೆಲ್‌ನಲ್ಲಿರುವ ಪ್ರಸಾದ್ ನೇತ್ರಾಲಯದ ಸಭಾಭವನದಲ್ಲಿ ನಡೆಯಲಿದೆ.

ನ್ಯೂರಪಿ ಮತ್ತು ಆರ್ಥೋಪ್ಟಿಕ್(ಆಂಬ್ಲೋಪಿಯಾ ಚಿಕಿತ್ಸೆ) ಕಣ್ಣಿನ ವಿಭಾಗ ಮತ್ತು ಐಒಎಲ್ ಮಾಸ್ಟರ್-700 ವಿಭಾಗಗಳನ್ನು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಉದ್ಘಾಟಿಸಲಿರುವರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬೆಂಗಳೂರಿನ ಸೆಂಚುರಿ ಗ್ರೂಪ್‌ನ ಡಾ.ಪಿ. ದಯಾನಂದ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ ಕಾಮತ್ ವಹಿಸಲಿರುವರು.

ಆಂಬ್ಲೋಪಿಯಾ ಅಥವಾ ಸೋಮಾರಿ ಕಣ್ಣು ಎಂಬುದು ಕಣ್ಣಿನ ನರ ವೈಜ್ಞಾನಿಕ ವ್ಯವಸ್ಥೆಗೆ ಸಂಬಂಧಿತ ತೊಂದರೆಯಾಗಿದೆ. ಆರ್ಥಾಪ್ಟಿಕ್ ನೂತನ ಚಿಕಿತ್ಸಾ ವಿಧಾನವಾಗಿದ್ದು, ಆಂಬ್ಲೋಪಿಯಾ ಚಿಕಿತ್ಸೆಗೆ ಅತೀ ಯಶಸ್ವೀ ವಿಧಾನ ವಾಗಿದೆ. ಐಒಎಲ್ ಮಾಸ್ಟರ್-700 ಇದು ಅತ್ಯಂತ ಮುಂದುವರಿದ ತಂತ್ರಜ್ಞಾನದ ಉಪಕರಣವಾಗಿದ್ದು, ಕಣ್ಣಿನ ಪೊರೆ ಚಿಕಿತ್ಸೆಗೆ ಬೇಕಾಗುವ ಲೆನ್ಸ್‌ನ ಪವರ್ ನಿಖರ ಲೆಕ್ಕಾಚಾರ ಮಾಡಲು ಸಹಕಾರಿಯಾಗಿದೆ ಎಂದು ಪ್ರಸಾದ್ ನೇತ್ರಾಲಯ ಕಣ್ಣಿನ ಸಮೂಹ ಆಸ್ಪತ್ರೆಗಳ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News