ಅಡವಿಟ್ಟಿರುವ ಶೇರುಗಳ ಬಿಡುಗಡೆಗಾಗಿ ಅದಾನಿ ಪ್ರವರ್ತಕರಿಂದ 1.114 ಬಿ.ಡಾ.ಪೂರ್ವಪಾವತಿ

Update: 2023-02-06 16:30 GMT

ಹೊಸದಿಲ್ಲಿ : ಅಡವಿಡಲಾಗಿರುವ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್(Adani Ports & SEZ) ಇಕನಾಮಿಕ್ ರೆನ್,ಅದಾನಿ ಗ್ರೀನ್ ಎನರ್ಜಿ(Adani Green Energy) ಮತ್ತು ಅದಾನಿ ಟ್ರಾನ್ಸ್‌ಮಿಷನ್‌(Adani Transmission)ನ ಶೇರುಗಳ ಭಾಗಶಃ ಬಿಡುಗಡೆಗಾಗಿ ಅದಾನಿ ಗ್ರೂಪ್ ಕಂಪನಿಗಳ ಪ್ರವರ್ತಕರು ಅವಧಿಗೆ (2024,ಸೆಪ್ಟಂಬರ್) ಮುನ್ನವೇ 1.114 ಶತಕೋಟಿ ಡಾಲರ್ (ಸುಮಾರು 9,214 ಕೋ.ರೂ.)ಗಳನ್ನು ಮರುಪಾವತಿಸಿದ್ದಾರೆ.

ಮಾರುಕಟ್ಟೆಯಲ್ಲಿನ ಇತ್ತೀಚಿನ ಏರಿಳಿತಗಳ ಹಿನ್ನೆಲೆಯಲ್ಲಿ ಮತ್ತು ಅದಾನಿ ಲಿಸ್ಟೆಡ್ ಕಂಪನಿಗಳ ಶೇರುಗಳಲ್ಲಿ ಪ್ರವರ್ತಕರ ಒಟ್ಟಾರೆ ಲೀವರೇಜ್‌ನ್ನು ತಗ್ಗಿಸುವ ಪ್ರವರ್ತಕರ ಬದ್ಧತೆಯ ಮುಂದುವರಿಕೆಯಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅದಾನಿ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.

1.114 ಶತಕೋಟಿ ಡಾ.ಗಳ ಪಾವತಿಯೊಂದಿಗೆ ಅದಾನಿ ಪೋರ್ಟ್ಸ್‌ನಲ್ಲಿಯ ಪ್ರವರ್ತಕರ ಸುಮಾರು 16.80 ಕೋ.(ಶೇ.12),ಅದಾನಿ ಗ್ರೀನ್ ಎನರ್ಜಿಯಲ್ಲಿಯ 2.756 ಕೋ.(ಶೇ.3) ಮತ್ತು ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿಯ 1.177 ಕೋ.(ಶೇ.1.4) ಶೇರುಗಳು ಅಡಮಾನ ಮುಕ್ತಗೊಳ್ಳಲಿವೆ.

Similar News