ಅಗ್ನಿವೀರ್ ಪರಿಕಲ್ಪನೆ ಆರೆಸ್ಸೆಸ್ ನದ್ದು ಎಂದು ಅಧಿಕಾರಿಯೋರ್ವರು ಹೇಳಿದ್ದರು: ರಾಹುಲ್ ಗಾಂಧಿ

Update: 2023-02-07 14:02 GMT

ಹೊಸದಿಲ್ಲಿ: ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಕೇಂದ್ರ ಸರ್ಕಾರ ಆರಂಭಿಸಿರುವ ಅಗ್ನಿವೀರ್‌ ಯೋಜನೆ ಕುರಿತು ಕಿಡಿಕಾರಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi),  ಈ ಯೋಜನೆಯನ್ನು ಆರೆಸ್ಸೆಸ್‌ (RSS) ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಸೇನೆಯ ಮೇಲೆ ಹೇರಿದೆ ಎಂದು ಆರೋಪಿಸಿದ್ದಾರೆ.

"ಅಗ್ನಿವೀರ್‌ ಕುರಿತಂತೆ ಹಿರಿಯ ಅಧಿಕಾರಿಗಳು ನಮಗೆ ತಿಳಿಸಿದಂತೆ ಈ ಪರಿಕಲ್ಪನೆಯು ಆರೆಸ್ಸೆಸ್‌ನಿಂದ ಬಂದಿದೆ ಮತ್ತು ಸೇನೆಯ ಮೇಲೆ ಹೇರಲಾಗಿದೆ. ನಾವು ಸಾವಿರಾರು ಮಂದಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದೇವೆ ಮತ್ತು ಅವರು ಶೀಘ್ರವೇ ಅತ್ಯಧಿಕ ನಿರುದ್ಯೋಗದ ನಡುವೆ ಮತ್ತೆ ಸಾಮಾನ್ಯ ನಾಗರಿಕರಾಗುತ್ತಾರೆ. ಈ ಪರಿಕಲ್ಪನೆಯ ಹಿಂದಿರುವ ವ್ಯಕ್ತಿ ಅಜಿತ್‌ ದೋವಲ್‌ ಎಂದು ಅಧಿಕಾರಿಗಳು ನನಗೆ ಹೇಳಿದರು," ಎಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ರಾಹುಲ್‌ ಹೇಳಿದರು.

"ರಾಷ್ಟ್ರಪತಿಗಳ ಭಾಷಣದಲ್ಲಿ ಅಗ್ನಿವೀರ್‌ ಯೋಜನೆಯನ್ನು ಹೇಗೆ ಒಂದು ಬಾರಿ ಮಾತ್ರ ಉಲ್ಲೇಖಿಸಲಾಗಿದೆ. ನಿರುದ್ಯೋಗ, ಹಣದುಬ್ಬರದ ಬಗ್ಗೆ ಒಂದು ಮಾತಿಲ್ಲ. ಯಾತ್ರೆಯ ವೇಳೆ ಜನರು ನನಗೆ ಹೇಳಿದ ವಿಚಾರಗಳಲ್ಲಿ ಯಾವುದು ಕೂಡ ರಾಷ್ಟ್ರಪತಿಗಳ ಭಾಷಣದಲ್ಲಿ ಕೇಳಿಲ್ಲ," ಎಂದು ರಾಹುಲ್‌ ಹೇಳಿದರು.

ಅದಾನಿ ವಿಷಯವನ್ನೂ ಪ್ರಸ್ತಾಪಿಸಿದ ಅವರು "ದೇಶಾದ್ಯಂತ, ಕೇರಳದಿಂದ ಕನ್ಯಾಕುಮಾರಿ ತನಕ ನಾನು ಕೇಳಿದ ಒಂದು ಶಬ್ದ ಅದಾನಿಯಾಗಿದೆ, ಅವರ ಸಂಪತ್ತು  2014 ರಲ್ಲಿ 8 ಬಿಲಿಯನ್‌ ಡಾಲರ್‌ ಆಗಿದ್ದರೆ 2022 ರಲ್ಲಿ ಹೇಗೆ 140 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ ಎಂದು ಯುವಜನತೆ ಕೇಳುತ್ತಿದ್ದರು ಎಂದು ರಾಹುಲ್‌ ವಿವರಿಸಿದರು.

ಇದನ್ನೂ ಓದಿ: ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಪಾರ್ಶ್ವವಾಯು ಪೀಡಿತ ತಂದೆಯನ್ನೇ ಕೊಂದ ಯುವಕ

Similar News