ಆದಿತ್ಯ ಠಾಕ್ರೆ ಕಾರಿನ ಮೇಲೆ ದಾಳಿ, ಕಲ್ಲು ತೂರಾಟ

Update: 2023-02-08 07:37 GMT

ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಆದಿತ್ಯ ಠಾಕ್ರೆ (Aaditya Thackeray)ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ  ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ ಶಿವಸೇನೆಯ ಹಿರಿಯ ನಾಯಕ ಹೇಳಿದ್ದಾರೆ.

ಆದರೆ, ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

"ನಾನು ಸ್ಥಳದಲ್ಲಿಯೇ ಇದ್ದೆ. ಯಾವುದೇ ಕಲ್ಲು ತೂರಾಟ ನಡೆದಿಲ್ಲ'' ಎಂದು ವೀರಗಾಂವ್ ಪೊಲೀಸ್ ಠಾಣೆ ಸಹಾಯಕ ನಿರೀಕ್ಷಕ ಶರದ್ಚಂದ್ರ ರಾಡ್ಜ್  ಹೇಳಿದರು.

ಶಿವಸೇನಾ (ಯುಬಿಟಿ) ನಾಯಕ ಹಾಗೂ  ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ,

 "ಠಾಕ್ರೆ ಅವರು ಸಭೆಯಿಂದ  ಹೊರಡುವಾಗ ಮಹಲ್ಗಾಂವ್ ಪ್ರದೇಶದಲ್ಲಿ ಸಭೆಯತ್ತ ಮೂರ್ನಾಲ್ಕು ಕಲ್ಲುಗಳನ್ನು ಎಸೆಯಲಾಯಿತು.  ಔರಂಗಾಬಾದ್‌ನಲ್ಲಿ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ದಾಳಿ, ಕಲ್ಲು ತೂರಾಟ ನಡೆದಿದೆ.  ಸಾರ್ವಜನಿಕ ಸಭೆಯ ವೇಳೆ ಹಾಗೂ  ಠಾಕ್ರೆ ಸ್ಥಳದಿಂದ ಹೊರಡುತ್ತಿದ್ದಾಗ ದಾಳಿ ನಡೆಸಲಾಗಿದೆ’’ ಎಂದು ಅವರು ಆರೋಪಿಸಿದ್ದಾರೆ.

“ಇದು ಹಿಂದೂ ಹಾಗೂ ದಲಿತ ಸಮುದಾಯಗಳ ನಡುವೆ ಜಗಳ ಸೃಷ್ಟಿಸುವ ಪ್ರಯತ್ನವಾಗಿದ್ದು ಇದನ್ನು ನಾವು ಖಂಡಿಸುತ್ತೇವೆ.  ಆದಿತ್ಯ ಠಾಕ್ರೆ ಕಾರ್ಯಕ್ರಮಕ್ಕೆ ಸಾಕಷ್ಟು ಭದ್ರತೆಯನ್ನು ಒದಗಿಸದ ಎಸ್ಪಿ ಸಹಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು''  ಎಂದು ದಾನ್ವೆ ಆಗ್ರಹಿಸಿದರು.

Similar News