ಪ್ರೇಮಿಗಳ ದಿನ ಬದಲು ಫೆಬ್ರವರಿ 14 ರಂದು 'ದನ ಆಲಂಗಿಸುವ ದಿನ' ಆಚರಿಸಲು ಕರೆ ನೀಡಿದ ಪ್ರಾಣಿ ಕಲ್ಯಾಣ ಮಂಡಳಿ

Update: 2023-02-09 06:50 GMT

ಹೊಸದಿಲ್ಲಿ: 'ವೆಲೆಂಟೈನ್ಸ್‌ ಡೇ' ಅಥವಾ ಪ್ರೇಮಿಗಳ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗ ಪ್ರಾಣಿ ಕಲ್ಯಾಣ ಮಂಡಳಿಯು ಹೊಸ ಪರಿಕಲ್ಪನೆಯೊಂದನ್ನು ಮಂದಿಟ್ಟಿದೆ.  ಫೆಬ್ರವರಿ 14 ರಂದು ದನಗಳನ್ನು ಆಲಂಗಿಸುವ ದಿನ (ಕೌ ಹಗ್‌ ಡೇ) (Cow Hugging) (Cow Hug Day) ಎಂದು ಆಚರಿಸಲು ಜನರಿಗೆ ಕರೆ ನೀಡಿದೆ.

ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ದನಗಳ ಮಹತ್ವವನ್ನು ತನ್ನ 'ಮನವಿ'ಯಲ್ಲಿ ತಿಳಿಸಿದ ಮಂಡಳಿ ಜನರಿಗೆ ಭಾವಾತ್ಮಕ ಸಮೃದ್ಧತೆ ಮತ್ತು ಸಂತೋಷನ್ನು ತರಲು 'ಕೌ ಹಗ್‌ ಡೇ' ಆಚರಿಸಲು ಬಯಸಿದ್ದಾಗಿ ಹೇಳಿದೆ.

ಮೀನುಗಾರಿಕಾ, ಪಶುಸಂಗೋಪನೆ ಮತ್ತು ಹೈನೋದ್ಯಮ ಸಚಿವಾಲಯ ಹಾಗೂ ಮಂಡಳಿ ಜಂಟಿಯಾಗಿ ಕೌ ಹಗ್‌ ಡೇ ಆಚರಿಸಲು ನಿರ್ಧರಿಸಿದೆ.

"ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14 ದಿನಾಂಕವನ್ನು ಗೋಮಾತೆಯ ಮಹತ್ವವನ್ನು ಗಮನದಲ್ಲಿರಿಸಿ ಹಾಗೂ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಂತೋಷಕ್ಕಾಗಿ ಕೌ ಹಗ್‌ ಡೇ ಆಗಿ ಆಚರಿಸಬೇಕು," ಎಂದು ಮಂಡಳಿ ಹೇಳಿದೆ.

Similar News