ವಿಮಾನದಲ್ಲಿ ಪ್ರಯಾಣಿಕನ ಲ್ಯಾಪ್‌ಟಾಪ್ ಬ್ಯಾಟರಿ ಸ್ಫೋಟ; 4 ಮಂದಿ ಅಸ್ವಸ್ಥ

Update: 2023-02-08 15:25 GMT

ವಾಷಿಂಗ್ಟನ್, ಫೆ.8: ಅಮೆರಿಕದ ಯುನೈಟೆಡ್ ಏರ್ಲೈನ್ಸ್(United Airlines) ಪ್ರಯಾಣಿಕನ ಬ್ಯಾಗ್ ನಲ್ಲಿದ್ದ ಲ್ಯಾಪ್‌ಟಾಪ್(laptop) ಬ್ಯಾಟರಿಗೆ ಬೆಂಕಿ ಹತ್ತಿಕೊಂಡ ಘಟನೆ ಅಮೆರಿಕದ ಸ್ಯಾನ್ಡಿಯಾಗೊ ಇಂಟರ್ನ್ಯಾಷನಲ್ ಏರ್ಪೋರ್ಟ್(San Diego International Airport)ನಲ್ಲಿ ಮಂಗಳವಾರ ನಡೆದಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ವಿಮಾನವನ್ನು ನಿಲ್ದಾಣದಲ್ಲಿ` ಮತ್ತೆ ಲ್ಯಾಂಡ್ ಮಾಡಲಾಯಿತು. ಬ್ಯಾಟರಿಗೆ ಬೆಂಕಿ ತಗುಲಿದ ಬಳಿಕ ವಿಮಾನದಲ್ಲಿ ಹೊಗೆ ಆವರಿಸಿಕೊಂಡು ವಿಮಾನದ ಸಿಬಂದಿ ಸಹಿತ 4 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಎನ್ಎನ್ ಸುದ್ಧಿಸಂಸ್ಥೆ ವರದಿ ಮಾಡಿದೆ.

ಪ್ರಯಾಣಿಕನೋರ್ವ ತನ್ನ ಬ್ಯಾಗ್ ನಿಂದ ವಸ್ತುವೊಂದನ್ನು ಹೊರಗೆಸೆದ. ಅದರಿಂದ ಹೊಗೆ ಬರುತ್ತಿತ್ತು. ಇತರ ಪ್ರಯಾಣಿಕರು ಗಾಭರಿಯಿಂದ ಚೀರಿಕೊಂಡರು. ವಿಮಾನದ ಕ್ಯಾಬಿನ್ ನಲ್ಲಿ ಹೊಗೆ ತುಂಬಿಕೊಂಡಾಗ ಸಿಬಂದಿ ಸಹಿತ ನಾಲ್ವರು ಅಸ್ವಸ್ಥಗೊಂಡರು. ಬಳಿಕ ವಿಮಾನವನ್ನು ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದ್ದು ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆ ನೀಡಿದೆ.

Similar News