ಟರ್ಕಿ, ಸಿರಿಯಾ ಭೂಕಂಪ: ಮೃತರ ಸಂಖ್ಯೆ 9,500ಕ್ಕೆ ಏರಿಕೆ

Update: 2023-02-08 15:34 GMT

ಅಂಕಾರ, ಫೆ.8: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 9,500ಕ್ಕೇರಿದೆ ಎಂದು ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.

ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದ್ದು  ಸತತ ಮೂರನೇ ದಿನವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಟರ್ಕಿಯಲ್ಲಿ 6,957 ಮತ್ತು ಸಿರಿಯಾದಲ್ಲಿ 2,547 ಮಂದಿ ಮೃತಪಟ್ಟಿದ್ದು ಮೃತಪಟ್ಟವರ ಒಟ್ಟು ಸಂಖ್ಯೆ 9,504 ತಲುಪಿದೆ. 25ಕ್ಕೂ ಹೆಚ್ಚು ದೇಶಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ತಮ್ಮ ತಂಡಗಳನ್ನು ರವಾನಿಸಿದ್ದು ಟರ್ಕಿಯ ತುರ್ತು ಸೇವಾ ಘಟಕದ 24,000 ಸದಸ್ಯರ ಜತೆ ಇವರು ಕೈಜೋಡಿಸಿದ್ದಾರೆ.

ಭೂಕಂಪದಲ್ಲಿ ಮೃತಪಟ್ಟವರಿಗೆ ಶೋಕಸೂಚಿಸಲು  ಬ್ರಸೆಲ್ಸ್ನಲ್ಲಿರುವ  ನೇಟೊದ ಪ್ರಧಾನ ಕಚೇರಿಯಲ್ಲಿ ಎಲ್ಲಾ 30 ಸದಸ್ಯ ದೇಶಗಳ ಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗಿದೆ ಎಂದು ಮೂಲಗಳು ಹೇಳಿವೆ.

Similar News