ಆಸ್ಟ್ರೇಲಿಯಾ ಯುದ್ಧಸ್ಮಾರಕದಿಂದ ಚೀನಾದ ಕ್ಯಾಮೆರಾ ತೆರವಿಗೆ ನಿರ್ಧಾರ‌

Update: 2023-02-08 15:44 GMT

ಸಿಡ್ನಿ, ಫೆ.8: ಆಸ್ಟ್ರೇಲಿಯಾದ ರಾಷ್ಟ್ರೀಯ ಯುದ್ಧಸ್ಮಾರಕದಲ್ಲಿ ಅಳವಡಿಸಲಾಗಿರುವ ಚೀನಾ ನಿರ್ಮಿತ ಸಿಸಿ ಕ್ಯಾಮೆರಾಗಳನ್ನು  ಬೇಹುಗಾರಿಕೆಗೆ ಬಳಸುತ್ತಿರುವ ಸಾಧ್ಯತೆ ಇರುವುದರಿಂದ ಅವುಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ಕ್ಯಾನ್ಬೆರಾದಲ್ಲಿರುವ ಆಸ್ಟ್ರೇಲಿಯಾ ಯುದ್ಧಸ್ಮಾರಕದಲ್ಲಿ ಹಿಕ್ವಿಷನ್ ಸಂಸ್ಥೆ ಉತ್ಪಾದಿಸಿರುವ 11 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಈ ಸಂಸ್ಥೆಯಲ್ಲಿ ಚೀನಾದ ಸರಕಾರವೂ ಪಾಲುದಾರನಾಗಿದೆ. ಚೀನಾ ನಿರ್ಮಿತ ಸಿಸಿ ಕ್ಯಾಮೆರಾಗಳನ್ನು ಬೇಹುಗಾರಿಕೆ ಉದ್ದೇಶಕ್ಕೆ ಬಳಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ  ಸರಕಾರಿ ಕಚೇರಿಗಳಲ್ಲಿ ಅಳವಡಿಸಿರುವ ಚೀನಾ ನಿರ್ಮಿತ ಕ್ಯಾಮೆರಾಗಳನ್ನು  ತೆರವುಗೊಳಿಸಲು ಬ್ರಿಟನ್ ಕೂಡಾ ಕ್ರಮ ಕೈಗೊಂಡಿದೆ.

ಚೀನಾ ನಿರ್ಮಿತ ಸಿಸಿ ಕ್ಯಾಮೆರಾಗಳನ್ನು ಬೇಹುಗಾರಿಕೆಗೆ ಬಳಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ಸಂಸದ ಜೇಮ್ಸ್ ಪ್ಯಾಟರ್ಸನ್ ಕಳೆದ ವರ್ಷ ಆಗ್ರಹಿಸಿದ್ದರು.‌

Similar News