ಟರ್ಕಿ ಭೂಕಂಪದ ತೀವ್ರತೆಯನ್ನು ತೋರಿಸಿದ ಉಪಗ್ರಹ ಚಿತ್ರಗಳು
Update: 2023-02-09 14:01 IST
ಇಸ್ತಾಂಬುಲ್: ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ 16,000 ಮಂದಿಯನ್ನು ಬಲಿ ಪಡೆದ ಭಾರಿ ಭೂಕಂಪದ ನಂತರ ಅಂತಾಕ್ಯ ನಗರದ ಸಂಪೂರ್ಣ ಭಾಗವು ನಾಶವಾಗಿರುವುದು ಹಾಗೂ ಪ್ರಮುಖ ಪಟ್ಟಣಗಳು ಅವಶೇಷಗಳಾಗಿರುವುದನ್ನು ಉಪಗ್ರಹ ಚಿತ್ರ ಸೆರೆ ಹಿಡಿದಿದೆ. ಈ ಪೈಕಿ ಅಂತಾಕ್ಯ ನಗರದ ದಕ್ಷಿಣ ಭಾಗ ಹಾಗೂ ಕಹ್ರಮನ್ಮರಾಸ್ ನಗರಗಳು ತೀವ್ರ ಹಾನಿಗೊಳಗಾಗಿದ್ದು, ಹಲವಾರು ಗಗನಚುಂಬಿ ಕಟ್ಟಡಗಳು ಧರಾಶಾಹಿಯಾಗಿರುವುದು ಸೆರೆಯಾಗಿದೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಭೂಕಂಪದಿಂದ ಸುಮಾರು 20 ದಶಲಕ್ಷ ಮಂದಿ ಸಂತ್ರಸ್ತರಾಗುವ ಸಾಧ್ಯತೆ ಇದ್ದು, ಭೂಕಂಪ ಬಾಧಿತ ಪ್ರದೇಶಗಳಲ್ಲಿ 77 ರಾಷ್ಟ್ರೀಯ ಹಾಗೂ 13 ಅಂತಾರಾಷ್ಟ್ರೀಯ ವೈದ್ಯಕೀಯ ತುರ್ತು ಸೇವೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದೆ.
ಭಾರತ ಕೂಡಾ ಕೆಲವು ಪರಿಹಾರ ಸಾಮಗ್ರಿಗಳನ್ನು ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ಕಳಿಸಿದೆ.