ಅದಾನಿ ಗುಂಪಿನೊಂದಿಗಿನ ಜಲಜನಕ ಒಪ್ಪಂದವನ್ನು ತಡೆಹಿಡಿದ ಫ್ರಾನ್ಸ್‌ನ ‘ಟೋಟಲ್ ಎನರ್ಜೀಸ್’
ಹಿಂಡನ್‌ಬರ್ಗ್ ರಿಸರ್ಚ್ ವರದಿಯ ಪರಿಣಾಮ
Update: 2023-02-09 22:56 IST
ಹೊಸದಿಲ್ಲಿ, ಫೆ. 9: ಅದಾನಿ(Adani) ಗುಂಪಿನ 4.12 ಲಕ್ಷ ಕೋಟಿ ರೂಪಾಯಿ ವೆಚ್ಚದ ಜಲಜನಕ ಯೋಜನೆಯಲ್ಲಿ ತನ್ನ ಭಾಗೀದಾರಿಕೆಯನ್ನು ಫ್ರಾನ್ಸ್ ಕಂಪೆನಿ ‘ಟೋಟಲ್ ಎನರ್ಜೀಸ್’ (TotalEnergies)ಬುಧವಾರ ತಡೆಹಿಡಿದಿದೆ. ಅದಾನಿ ಗುಂಪು ಆರ್ಥಿಕ ಅವ್ಯವಹಾರದಲ್ಲಿ ತೊಡಗಿದೆ ಎಂಬುದಾಗಿ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್(Hindenburg Research) ಗುಂಪು ಆರೋಪಿಸಿದ ಬಳಿಕ ಅದು ಈ ಕ್ರಮ ತೆಗೆದುಕೊಂಡಿದೆ.
ಅದಾನಿ ಗುಂಪಿನ ಜಲಜನಕ ಯೋಜನೆಯಲ್ಲಿ ಭಾಗೀದಾರಿಕೆ ಹೊಂದುವುದಾಗಿ ಟೋಟಲ್ ಎನರ್ಜೀಸ್ ಜೂನ್‌ನಲ್ಲಿ ಘೋಷಿಸಿತ್ತು. ಯೋಜನೆಯ ವೆಚ್ಚದ 25 ಶೇಕಡವನ್ನು ಹೂಡಿಕೆ ಮಾಡಲು ಅದು ಒಪ್ಪಿಕೊಂಡಿತ್ತು.
ಹಿಂಡನ್‌ಬರ್ಗ್ ರಿಸರ್ಚ್ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ, ತನ್ನ ಕಂಪೆನಿಗಳ ಲೆಕ್ಕಪರಿಶೋಧನೆ ಮಾಡುವುದಾಗಿ ಅದಾನಿ ಗುಂಪು ಘೋಷಿಸಿದೆ. ಆ ವರದಿಗಾಗಿ ಕಾಯುತ್ತಿರುವುದಾಗಿ ಟೋಟಲ್ ಎನರ್ಜೀಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಟ್ರಿಕ್ ಪೋಯನ್ ಬುಧವಾರ ತಿಳಿಸಿದರು.