ಭಾರತದಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಟಿಕ್ ಟಾಕ್: ಎಲ್ಲ ಉದ್ಯೋಗಿಗಳ ವಜಾ

Update: 2023-02-10 10:39 GMT

ಹೊಸದಿಲ್ಲಿ: ಚೀನಾದ ವಿಡಿಯೊ ಆ್ಯಪ್ ಟಿಕ್ ಟಾಕ್ ಭಾರತದಲ್ಲಿನ ತನ್ನ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು Economic Times ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ವರದಿಯ ಪ್ರಕಾರ, ಬೈಟ್ ಡಾನ್ಸ್ ಮಾಲಕತ್ವದ ಟಿಕ್ ಟಾಕ್ ತಂತ್ರಾಂಶವು ಕರೆ ಮೂಲಕ ಈ ವಾರ 40 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದೆ. ವಜಾಗೊಂಡ ಉದ್ಯೋಗಿಗಳಿಗೆ ಒಂಬತ್ತು ತಿಂಗಳ ಪರಿಹಾರ ವೇತನವನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ Economic Times, ಭಾರತದಲ್ಲಿನ ಟಿಕ್ ಟಾಕ್ ಉದ್ಯೋಗಿಗಳಿಗೆ ಫೆಬ್ರವರಿ 28 ಅವರ ಕೊನೆಯ ಕೆಲಸದ ದಿನ ಎಂದು ತಿಳಿಸಲಾಗಿದೆ ಮತ್ತು ಚೀನಾ ತಂತ್ರಾಂಶಗಳ ಕುರಿತ ಸರ್ಕಾರದ ನಿಲುವಿನಿಂದ ಭಾರತದಲ್ಲಿ ಪುನಃ ಕಾರ್ಯಾಚರಣೆ ಸಾಧ್ಯತೆ ಇಲ್ಲವಾಗಿದ್ದು, ಕೆಲ ಸಮಯ ಬೇರೆ ಉದ್ಯೋಗಾವಕಾಶಗಳನ್ನು ಹುಡುಕಿಕೊಳ್ಳಬಹುದು ಎಂದು ವಜಾಗೊಳಿಸಲ್ಪಟ್ಟಿರುವ ಉದ್ಯೋಗಿಗಳಿಗೆ ತಿಳಿಸಿದೆ ಎಂದು ಹೇಳಿದೆ.

2020ರಲ್ಲಿ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಭಾರತ ಸರ್ಕಾರವು ಚೀನಾದ 300 ತಂತ್ರಾಂಶಗಳನ್ನು ನಿಷೇಧಿಸಿದ ನಂತರ ಭಾರತೀಯ ಉದ್ಯೋಗಿಗಳು ಬಹುಶಃ ಬ್ರೆಝಿಲ್ ಮತ್ತು ದುಬೈನಿಂದ ಕಾರ್ಯನಿರ್ವಹಿಸುತ್ತಿದ್ದರು. 2020ರಲ್ಲಿ ನಿಷೇಧಕ್ಕೊಳಗಾಗುವ ಮುನ್ನ  ಭಾರತದಲ್ಲಿ ಟಿಕ್ ಟಾಕ್ 200 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿತ್ತು.

Similar News