×
Ad

ಈ ವರ್ಷದ ಬಜೆಟ್ ಸೋರಿಕೆಯಾಗಿಲ್ಲ: ಅಶೋಕ್ ಗೆಹ್ಲೋಟ್ ಸ್ಪಷ್ಟನೆ

Update: 2023-02-10 13:32 IST

ಹೊಸದಿಲ್ಲಿ: ರಾಜಸ್ಥಾನ ವಿಧಾನಸಭೆಯಲ್ಲಿ ಶುಕ್ರವಾರ ಸದನ ಮರು ಸಮಾವೇಶಗೊಂಡ ತಕ್ಷಣ ಬಜೆಟ್ ಸೋರಿಕೆಯ ಆರೋಪಗಳನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್,  ಯಾವುದೇ ಸೋರಿಕೆಯಾಗಿಲ್ಲ ಹಾಗೂ  ಉಲ್ಲೇಖಿಸಲು ಇಡಲಾಗಿದ್ದ ಕಳೆದ ವರ್ಷದ ಬಜೆಟ್‌ನ ಹೆಚ್ಚುವರಿ ಪುಟವು ಹೊಸ ಬಜೆಟ್ ದಾಖಲೆಗಳಲ್ಲಿತ್ತು ಎಂದರು.

"ಬಿಜೆಪಿಯು ಇದು ರಾಜಸ್ಥಾನದ ಅಭಿವೃದ್ಧಿ ಹಾಗೂ  ಪ್ರಗತಿಗೆ ವಿರುದ್ಧವಾಗಿದೆ ಎಂದು ತೋರಿಸಲು ಬಯಸಿದೆ. ಬಜೆಟ್ ಸೋರಿಕೆಯಾಗಿದೆ ಎಂಬ ಅವರ ಕಾಲ್ಪನಿಕ ಆರೋಪವು ಕ್ಷುಲ್ಲಕ ರಾಜಕೀಯದಿಂದ ಬಜೆಟ್ ಅನ್ನು  ಅವರು ಬಿಡಲಾರರು  ಎಂಬುದನ್ನು ತೋರಿಸುತ್ತದೆ. 'ಬಚತ್, ರಹತ್, ಬದತ್' (ಉಳಿತಾಯ, ಪರಿಹಾರ ಮತ್ತು ಪ್ರಗತಿ) ಈ ವರ್ಷದ ರಾಜ್ಯ ಬಜೆಟ್‌ನ ವಿಷಯವಾಗಿದೆ ''ಎಂದು ಟ್ವೀಟಿಸಿದರು.

ಗೆಹ್ಲೋಟ್ ಅವರು ಬಜೆಟ್ 2023-24 ರ ಬದಲಿಗೆ ನಗರ ಉದ್ಯೋಗ ಹಾಗೂ  ಕೃಷಿ ಬಜೆಟ್‌ನ ಹಿಂದಿನ ಬಜೆಟ್‌ನ ಆಯ್ದ ಭಾಗಗಳನ್ನು ಓದಿದರು. 2022-23ರ ಬಜೆಟ್‌ನಲ್ಲಿ ಅವರು ಮೊದಲ ಎರಡು ಘೋಷಣೆಗಳನ್ನು ಮಾಡಿದ ತಕ್ಷಣ ಪ್ರತಿಪಕ್ಷಗಳು ಗದ್ದಲವನ್ನು ಸೃಷ್ಟಿಸಲು ಆರಂಭಿಸಿದವು ಮತ್ತು ಸದನದ ಬಾವಿಗೆ ಧಾವಿಸಿದವು.

Similar News