ದೇಶದಲ್ಲಿ 1333 ಬಹುರಾಷ್ಟ್ರೀಯ ಕಂಪೆನಿಗಳ ಮುಚ್ಚುಗಡೆ: ಕೇಂದ್ರ ಸರಕಾರ
ಹೊಸದಿಲ್ಲಿ,ನ.22: ದೇಶದಲ್ಲಿ ಸುಮಾರು 1333 ಬಹುರಾಷ್ಟ್ರೀಯ ಕಂಪೆನಿಗಳು (MNC) ಮುಚ್ಚುಗಡೆಗೊಂಡಿವೆ. ಆದರೆ 4900ಕ್ಕೂ ಅಧಿಕ ಹೊಸ ಎಂಎನ್‌ಸಿಗಳು ಆರಂಭಗೊಂಡಿದ್ದು, ವೃತ್ತಿಪರರಿಗೆ ಹೊಸ ಮಾರ್ಗಗಳನ್ನು ಹಾಗೂ ಉದ್ಯೋಗವಕಾಶಗಳನ್ನು ತೆರಿದಿಟ್ಟಿವೆ ಎಂದು ಕೇಂದ್ರ ಸರಕಾರವು ಶುಕ್ರವಾರ ಲೋಕಸಭೆಗೆ ತಿಳಿಸಿದೆ.
ರಾಜ್ಯಸಭಾದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಕ್ರಿಯಿಸಿದ ರಾಜ್ಯ ವಾಣಿಜ್ಯ ಹಾಗೂ ಕೈಗಾರಿಕಾ ಖಾತೆಯ ಸಹಾಯಕ ಸಚಿವ ಸೋಮ್ ಪ್ರಕಾಶ್(Som Parkash) ಅವರು, ಕೆಲವು ಎಂಎನ್‌ಸಿಗಳು ಮುಚ್ಚುಗಡೆಯಾಗುವುದು ಹಾಗೂ ಕೆಲವು ಹೊಸ ಎಂಎನ್‌ಸಿಗಳು ತಲೆಯತ್ತುವುದು ತೀರಾ ಸಾಮಾನ್ಯವಾಗಿ ಬಿಟ್ಟಿದೆ ಎಂದವರು ಹೇಳಿದರು.
ದೇಶದಲ್ಲಿ ಒಟ್ಟು 1333 ಎಂಎನ್‌ಸಿಗಳು ಮುಚ್ಚುಗಡೆಯಾಏಗಗಿವೆ. ಈ ಪೈಕಿ 313 ಎಂಎನ್‌ಸಿಗಳು ವಿದೇಶಿ ಮೂಲದ್ದಾಗಿವೆ ಹಾಗೂ 1017 ಎಂಎನ್‌ಸಿಗಳು ಅವುಗಳ ಉಪಸಂಸ್ಥೆಗಳಾಗಿವೆ ಎಂದವರು ತಿಳಿಸಿದರು.
‘‘ಮುಚ್ಚುಗಡೆಯಾಗಿರುವ 1333 ಎಂಎನ್‌ಸಿಗಳಿಗೆ ಹೋಲಿಸಿದರೆ, 4906 ಹೊಸ ಎಂಎನ್‌ಸಿಗಳು ಆರಂಭಗೊಂಡಿವೆ. ಇವು ಹೊಸ ದಾರಿಗಳನ್ನು ತೆರೆಯಲಿವೆ ಹಾಗೂ ಉದ್ಯೋಗಾವಕಾಶಗಳನ್ನು ತೆರೆಯಲಿವೆ’’ ಎಂದು ಪ್ರಕಾಶ್ ತಿಳಿಸಿವೆ.
ಆದರೆ ಎಂಎನ್‌ಸಿಗಳು ಮುಚ್ಚುಗಡೆಗೊಂಡ ಹಾಗೂ ನೂತನ ಎಂಎನ್‌ಸಿಗ ಆರಂಭದ ಕುರಿತ ಕಾಲಾವಧಿಯ ಬಗ್ಗೆ ಸಚಿವರು ಯಾವುದೇ ವಿವರಗಳನ್ನು ಸದನಕ್ಕೆ ನೀಡಲಿಲ್ಲ.