×
Ad

ದಿಲ್ಲಿ ಮದ್ಯ ಹಗರಣ: ವೈಎಸ್‌ಆರ್‌ಸಿಪಿ ಸಂಸದ ಶ್ರೀನಿವಾಸ ರೆಡ್ಡಿ ಪುತ್ರನ ಬಂಧಿಸಿದ ಈಡಿ

Update: 2023-02-11 10:06 IST

ಹೊಸದಿಲ್ಲಿ: ದಿಲ್ಲಿ ಮದ್ಯ ಹಗರಣಕ್ಕೆ (Delhi liquor scam)ಸಂಬಂಧಿಸಿದಂತೆ ವೈಎಸ್‌ಆರ್‌ಸಿಪಿ ಸಂಸದ ಮಾಗುಂಟ ಶ್ರೀನಿವಾಸ ರೆಡ್ಡಿ ಅವರ ಪುತ್ರ ಮಾಗುಂಟ ರಾಘವ ಅವರನ್ನು ಜಾರಿ ನಿರ್ದೇಶನಾಲಯ(ಈಡಿ)  ಶುಕ್ರವಾರ ಬಂಧಿಸಿದೆ.

ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಗುಂಟ ಶ್ರೀನಿವಾಸಲು ರೆಡ್ಡಿ ಅವರನ್ನು ಭೇಟಿ ಮಾಡಿದ್ದನ್ನು ಈಡಿ ಉಲ್ಲೇಖಿಸಿದೆ.

ತೆಲಂಗಾಣ ಮೂಲದ ಚಾರ್ಟರ್ಡ್ ಅಕೌಂಟೆಂಟ್, ಕೆಸಿಆರ್ ಅವರ ಪುತ್ರಿ ಕೆ.ಕವಿತಾ ಅವರ ಮಾಜಿ ಆಡಿಟರ್ ಬುಚ್ಚಿಬಾಬು ಗೋರಂಟ್ಲಾ ಅವರನ್ನು ದಿಲ್ಲಿ ಮದ್ಯದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದ ಕೆಲವೇ ದಿನಗಳಲ್ಲಿ ಮಾಗುಂಟ ರಾಘವ ಅವರ ಬಂಧನವಾಗಿದೆ.

 ಗೋರಂಟ್ಲಾ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ,  ತನಿಖಾಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.

Similar News