×
Ad

ಮೊದಲ ಟೆಸ್ಟ್: ಅಶ್ವಿನ್, ಜಡೇಜ ಸ್ಪಿನ್ ಮೋಡಿ, ಭಾರತಕ್ಕೆ ಇನಿಂಗ್ಸ್ ಅಂತರದ ಜಯ

Update: 2023-02-11 14:28 IST

ನಾಗ್ಪುರ, ಫೆ.11: ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ (5-37)  ಹಾಗೂ ರವೀಂದ್ರ ಜಡೇಜ(2-34)  ಅವರ ಅಮೋಘ ಬೌಲಿಂಗ್ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ದ ಇನಿಂಗ್ಸ್ ಹಾಗೂ 132 .ರನ್ ನಿಂದ ಭರ್ಜರಿ ಜಯ ದಾಖಲಿಸಿದೆ.

ಈ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಆಲ್ ರೌಂಡರ್ ಅಕ್ಷರ್ ಪಟೇಲ್ ಭರ್ಜರಿ ಅರ್ಧಶತಕದ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯ ವಿರುದ್ದ ಬರೋಬ್ಬರಿ 400 ರನ್ ಗಳಿಸಿ ಆಲೌಟಾಗಿದೆ. 223 ರನ್ ಮೊದಲ ಇನಿಂಗ್ಸ್ ಪಡೆಯುವಲ್ಲಿ ಯಶಸ್ವಿಯಾಗಿದೆ.

2ನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು,32.3 ಓವರ್ ಗಳಲ್ಲಿ ಕೇವಲ 91 ರನ್  ಗಳಿಸಿ ಆಲೌಟಾಗಿದೆ.  ಆಸೀಸ್ ಪರ ಮಾಜಿ ನಾಯಕ ಸ್ಟೀವನ್ ಸ್ಮಿತ್ (ಔಟಾಗದೆ 25) ಮಾತ್ರ ಒಂದಷ್ಟು ಹೋರಾಟ ನೀಡಿದರು. ಉಳಿದವರು ಪೆವಿಲಿಯನ್ ಗೆ ಪರೇಡ್ ನಡೆಸಿದರು.

Similar News