×
Ad

ರ‍್ಯಾಪರ್ ಕೀರ್ನಾನ್ ಫೋರ್ಬ್ಸ್ ಗುಂಡೇಟಿಗೆ ಬಲಿ

Update: 2023-02-11 18:19 IST

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ರ್ಯಾಪರ್ ಕೀರ್ನಾನ್ ಫೋರ್ಬ್ಸ್ (35) ರನ್ನು ಶುಕ್ರವಾರ ಸಂಜೆ ಡರ್ಬನ್‌ನ ಜನಪ್ರಿಯ ರೆಸ್ಟೋರೆಂಟ್‌ ಒಂದರ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ರ್ಯಾಪರ್ ಎಕೆಎ ಎಂದು ಗುರುತಿಸಲ್ಪಡುವ ಅವರ ಮೇಲೆ ಆರು ಬಾರಿ ಗುಂಡು ಹಾರಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ತಿಳಿಸಿವೆ.

ಗಾಯಕನ ಸಾವಿಗೆ ಸಂತಾಪ ಸೂಚಿಸಿ, ಫೋರ್ಬ್ಸ್ ಅವರ ಪೋಷಕರು ಫೋರ್ಬ್ಸ್ ರ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಣೆ ಹೊರಡಿಸಿದ್ದಾರೆ.

"ನಮ್ಮ ಪ್ರೀತಿಯ ಮಗನ ನಿಧನವನ್ನು ನಾವು ತೀವ್ರ ದುಃಖದಿಂದ ಒಪ್ಪಿಕೊಳ್ಳುತ್ತೇವೆ" ಎಂದು ಅವರ ಪೋಷಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡರ್ಬನ್ ಪೊಲೀಸ್ ಅಧಿಕಾರಿಗಳಿಂದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಎಕೆಎಯ ಹೊಸ 'ಮಾಸ್ ಕೌಂಟಿ' ಫೆಬ್ರವರಿ 27 ರಂದು ಬಿಡುಗಡೆಯಾಗಬೇಕಿತ್ತು.

Similar News