ಮಹಿಳಾ ಟ್ವೆಂಟಿ-20 ವಿಶ್ವಕಪ್: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2023-02-12 16:45 GMT

ಕೇಪ್‌ಟೌನ್, ಫೆ.12: ಅಗ್ರ ಸರದಿಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅರ್ಧಶತಕದ(53 ರನ್, 38 ಎಸೆತ,4 ಬೌಂಡರಿ)ಕೊಡುಗೆಯ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ರವಿವಾರ ನಡೆದ ವನಿತೆಯರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್ ಅಂತರದಿಂದ ಸುಲಭವಾಗಿ ಮಣಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ನಾಯಕಿ ಮರೂಫ್(ಔಟಾಗದೆ 68 ರನ್, 55 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಅಯೇಶಾ ನಸೀಂ ಔಟಾಗದೆ 43 ರನ್ ಗಳಿಸಿದರು. ಭಾರತದ ಪರ ರಾಧಾ ಯಾದವ್(2-21)ಯಶಸ್ವಿ ಪ್ರದರ್ಶನ ನೀಡಿದರು.

ಗೆಲ್ಲಲು 150 ರನ್ ಗುರಿ ಪಡೆದ ಭಾರತ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ರೋಡ್ರಿಗಸ್ ಸರ್ವಾಧಿಕ ಸ್ಕೋರ್ ಗಳಿಸಿ ಪಂದ್ಯಶ್ರೇಷ್ಠ ಗೌರವ ಪಡೆದರು. ಶೆಫಾಲಿ ವರ್ಮಾ 33 ರನ್, ರಿಚಾ ಘೋಷ್ ಔಟಾಗದೆ 31 ರನ್, ಯಸ್ತಿಕಾ ಭಾಟಿಯಾ 17 ರನ್ ಹಾಗೂ ಹರ್ಮನ್‌ಪ್ರೀತ್ 16 ರನ್ ಕೊಡುಗೆ ನೀಡಿದರು.
 

Similar News