×
Ad

ಕನಿಷ್ಠ 695 ವಿ.ವಿ., 34,734 ಕಾಲೇಜು ನ್ಯಾಕ್ ಮಾನ್ಯತೆ ಇಲ್ಲದೆ ಕಾರ್ಯ ನಿರ್ವಹಣೆ: ಸಂಸತ್ತಿಗೆ ತಿಳಿಸಿದ ಕೇಂದ್ರ

Update: 2023-02-13 21:49 IST

ಹೊಸದಿಲ್ಲಿ, ಫೆ. 13:  ದೇಶಾದ್ಯಂತ ಕನಿಷ್ಠ 695 ವಿಶ್ವವಿದ್ಯಾನಿಲಯಗಳು ಹಾಗೂ 34,734 ಕಾಲೇಜುಗಳು ನ್ಯಾಕ್ (NAC)ನ  ಮಾನ್ಯತೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿವೆ ಎಂದು ಸೋಮವಾರ ಸಂಸತ್ತಿಗೆ ಮಾಹಿತಿ ನೀಡಲಾಯಿತು.

ಲಿಖಿತ ಪ್ರಶ್ನೆಗೆ ಕೇಂದ್ರ ಶಿಕ್ಷಣ ಖಾತೆಯ ಸಹಾಯಕ ಸಚಿವ ಸುಭಾಶ್ ಸರ್ಕಾರ್ ಅವರು ಈ ದತ್ತಾಂಶವನ್ನು ಲೋಕಸಭೆಯಲ್ಲಿ ನೀಡಿದರು.

‘‘ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (UGC)ದಿಂದ ಸ್ವೀಕರಿಸಲಾದ ಮಾಹಿತಿ ಪ್ರಕಾರ 1,113 ವಿಶ್ವವಿದ್ಯಾನಿಲಯಗಳು ಹಾಗೂ 43,796 ಕಾಲೇಜುಗಳಲ್ಲಿ 418 ವಿಶ್ವವಿದ್ಯಾನಿಲಯಗಳು  ಹಾಗೂ 9,062 ಕಾಲೇಜುಗಳು ಮಾತ್ರ ನ್ಯಾಕ್ ಮಾನ್ಯತೆ ಹೊಂದಿದೆ’’ ಎಂದು ಅವರು ಹೇಳಿದ್ದಾರೆ.

‘‘ಎಲ್ಲ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳನ್ನು ನ್ಯಾಕ್‌ನ ಮಾನ್ಯತೆ ವ್ಯವಸ್ಥೆ ಅಡಿಯಲ್ಲಿ ತರಲು ನ್ಯಾಕ್ ಮೌಲ್ಯ ಮಾಪನ ಹಾಗೂ ಮಾನ್ಯತೆಯ ಶುಲ್ಕವನ್ನು ಗಣನೀಯವಾಗಿ ಇಳಿಕೆ ಮಾಡಿದೆ’’  ಎಂದು ಸರ್ಕಾರ್ ತಿಳಿಸಿದ್ದಾರೆ. 

ಇದನ್ನು ಓದಿ:  ಜಾಮಿಯಾ ಹಿಂಸಾಚಾರ ಆರೋಪಿಗಳ ದೋಷಮುಕ್ತಿ ಪ್ರಶ್ನಿಸಿ ಪೊಲೀಸ್ ಅರ್ಜಿ: ಶರ್ಜೀಲ್, ಸಫೂರಾಗೆ ಹೈಕೋರ್ಟ್ ನೋಟಿಸ್

Similar News