×
Ad

ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಶೇ.6.52ಕ್ಕೆ ಜಿಗಿದ ಚಿಲ್ಲರೆ ಹಣದುಬ್ಬರ

Update: 2023-02-13 22:28 IST

ಹೊಸದಿಲ್ಲಿ,ಫೆ.13: ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಜನವರಿ ತಿಂಗಳಿಗೆ ಕಳೆದ ಮೂರು ತಿಂಗಳುಗಳ ಗರಿಷ್ಠ ಮಟ್ಟವಾದ ಶೇ.6.52ಕ್ಕೆ ತಲುಪಿದ್ದು,ಆರ್‌ಬಿಐನ ಶೇ.6ರ ಸಹಿಷ್ಣುತೆ ಮಿತಿಯನ್ನು ಮೀರಿದೆ. ಚಿಲ್ಲರೆ ಹಣದುಬ್ಬರ ಡಿಸೆಂಬರ್ 2022ರಲ್ಲಿ ಶೇ.5.72ರಷ್ಟಿದ್ದು,ಹಿಂದಿನ ಗರಿಷ್ಠ ಮಟ್ಟ ಶೇ.6.77 ಅಕ್ಟೋಬರ್ 2022ರಲ್ಲಿ ದಾಖಲಾಗಿತ್ತು. ಕಳೆದ ವರ್ಷದ ಜನವರಿಯಲ್ಲ ಚಿಲ್ಲರೆ ಹಣದುಬ್ಬರ ಶೇ.6.01ರಷ್ಟಿತ್ತು.

ಚಿಲ್ಲರೆ ಹಣದುಬ್ಬರ ಶೇ.2 ಮತ್ತು ಶೇ.6ರ ನಡುವೆ ಇರುವುದನ್ನು ಖಚಿತ ಪಡಿಸಿಕೊಳ್ಳುವಂತೆ ಕೇಂದ್ರ ಸರಕಾರವು ಆರ್‌ಬಿಐಗೆ ಆದೇಶಿಸಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶೇ.4.2ರಷ್ಟಿದ್ದ ಆಹಾರ ಹಣದುಬ್ಬರ ಜನವರಿಯಲ್ಲಿ ಶೇ.5.94ಕ್ಕೆ ಜಿಗಿದಿದ್ದು,ಇದು ಚಿಲ್ಲರೆ ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ.

 ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶೇ.6.05ರಷ್ಟಿದ್ದ ಗ್ರಾಮೀಣ ಹಣದುಬ್ಬರ ಜನವರಿಯಲ್ಲಿ ಶೇ.6.85ಕ್ಕೆ ಏರಿಕೆಯಾಗಿದ್ದರೆ, ಶೇ.5.4ರಷ್ಟಿದ್ದ ನಗರ ಹಣದುಬ್ಬರವು ಶೇ.6ಕ್ಕೆ ಜಿಗಿದಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಸೋಮವಾರ ತಿಳಿಸಿದೆ.

ತರಕಾರಿಗಳಿಗೆ ಹಣದುಬ್ಬರವು ಜನವರಿಯಲ್ಲಿ ಶೇ.11.7ರಷ್ಟು ಇಳಿಕೆಯನ್ನು ಕಂಡಿದೆ. 2022 ಜನವರಿಯಲ್ಲಿ ಈ ಇಳಿಕೆ ಶೇ.15.1ರಷ್ಟಾಗಿತ್ತು. 2022 ಡಿಸೆಂಬರ್‌ನಲ್ಲಿ ಶೇ.11ರಷ್ಟಿದ್ದ ಇಂಧನ ಮತ್ತು ಬೆಳಕಿಗಾಗಿ ಹಣದುಬ್ಬರ ದರವು ಜನವರಿಯಲ್ಲಿ ಶೇ.10.85ಕ್ಕೆ ತಗ್ಗಿದೆ.

ಧಾನ್ಯಗಳಿಗಾಗಿ ಹಣದುಬ್ಬರ ದರವು ಡಿಸೆಂಬರ್ 2022ರ ಶೇ.13.8ರಿಂದ ಜನವರಿಯಲ್ಲಿ ಶೇ.16.1ಕ್ಕೆ ಜಿಗಿದಿದೆ.

ಇದನ್ನು ಓದಿ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ಗೆ ಮುರಿದ ಖುರ್ಚಿಯನ್ನು ಎಸೆದ ಕಿಡಿಗೇಡಿಗಳು: ವಿಡಿಯೋ ವೈರಲ್

Similar News