ಹಲವು ಬಾರಿ ದಂಡ ವಿಧಿಸಲ್ಪಟ್ಟಿದ್ದ ಸ್ವತಂತ್ರ ಲೆಕ್ಕ ಪರಿಶೋಧನೆಗೆ ಅದಾನಿ ನೇಮಿಸಿದ ಅಮೆರಿಕಾದ ಸಂಸ್ಥೆ

Update: 2023-02-14 12:17 GMT

ಹೊಸದಿಲ್ಲಿ: ಇತ್ತೀಚೆಗೆ ಹಿಂಡೆನ್ಬರ್ಗ್‌ ವರದಿಯ ಬಳಿಕ ಅದಾನಿ ಸಂಸ್ಥೆಯು ಅಲ್ಲೋಲಕಲ್ಲೋಲವಾಗಿದ್ದು, ಇದೀಗ ತನ್ನ ಸ್ವತಂತ್ರ ಲೆಕ್ಕ ಪರಿಶೋಧನೆಯನ್ನು ನಡೆಸಲು ಅಮೆರಿಕಾದ ಗ್ರಾಂಟ್ ಥಾರ್ನ್‌ಟನ್ ಅನ್ನು ನೇಮಿಸಿಕೊಂಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಇದರ ಬೆನ್ನಲ್ಲೇ ಗ್ರಾಂಟ್ ಥಾರ್ನ್‌ಟನ್ ಕಂಪೆನಿಯ ಮೇಲೆ ಹಲವು ಬಾರಿ ದಂಡ ವಿಧಿಸಲಾಗಿರುವ ಪತ್ರಿಕಾ ವರದಿ ತುಣುಕುಗಳನ್ನು ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ಹಂಚಿಕೊಂಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 

2015ರಿಂದ 2022ರವರೆಗೆ ಗ್ರಾಂಟ್ ಥಾರ್ನ್‌ಟನ್ ಸಂಸ್ಥೆಗೆ ಹಲವು ಬಾರಿ ಭಾರೀ ಮೊತ್ತದ ದಂಡಗಳನ್ನು ಲೆಕ್ಕಪರಿಶೋಧನೆಯಲ್ಲಿ ವಿಫಲವಾಗಿರುವುದಕ್ಕೆ ವಿಧಿಸಲಾಗಿತ್ತು ಎಂದು ಝುಬೈರ್‌ ಸ್ಕ್ರೀನ್‌ಶಾಟ್‌ ಮೂಲಕ ಬೆಟ್ಟು ಮಾಡಿದ್ದಾರೆ. "ಅವರು ಈಗಾಗಲೇ ಹಲವಾರು ಗೋದಿ ಮೀಡಿಯಾಗಳನ್ನೇ ನೇಮಿಸಿಕೊಂಡಿದ್ದಾರೆ, ಇದೇನು ಮಹಾ! ಎಂದು ಬಳಕೆದಾರರೋರ್ವರು ಕಮೆಂಟ್‌ ಮಾಡಿದ್ದಾರೆ. "ಹಲವು ಆಡಿಟ್‌ ಕಂಪೆನಿಗಳಿಗೆ ಕೆಲ ಸಂದರ್ಭಗಳಲ್ಲಿ ದಂಡ ವಿಧಿಸಲ್ಪಡುವುದು ಸಹಜ, ಇದರಲ್ಲೇನೂ ವಿಶೇಷವಿಲ್ಲ" ಎಂದು ಇನ್ನಿತರರು ಕಮೆಂಟ್‌ ಮೂಲಕ ಸಮರ್ಥಿಸಿಕೊಂಡಿದ್ದಾರೆ.

Similar News