×
Ad

ಹಳೆ ಟ್ವೀಟ್ ವೈರಲ್: ಕಾಮಿಡಿಯನ್ ತನ್ಮಯ್ ಭಟ್ ರನ್ನು ಜಾಹಿರಾತಿನಿಂದ ಕೈಬಿಟ್ಟ ಕೋಟಕ್‌ ಬ್ಯಾಂಕ್‌

Update: 2023-02-14 21:19 IST

ಹೊಸದಿಲ್ಲಿ: ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಜಾಹೀರಾತಿನಿಂದ ಕಾಮಿಡಿಯನ್  ತನ್ಮಯ್ ಭಟ್ ಅವರನ್ನು ಕೈಬಿಟ್ಟಿದೆ. ತನ್ಮಯ್ ಭಟ್ ಅವರ ಹಳೆಯ ಟ್ವೀಟ್ ಅನ್ನು ಮತ್ತೆ ಹೆಕ್ಕಿ ತಂದಿರುವ ನೆಟ್ಟಿಗರು,  ಅಂತಹ ವ್ಯಕ್ತಿಯನ್ನು ಕೋಟಕ್‌ ಬ್ಯಾಂಕ್‌ ತನ್ನ ಜಾಹಿರಾತಿನ ಮುಖವನ್ನಾಗಿ ಮಾಡಿದ್ದಕ್ಕಾಗಿ ಆಕ್ಷೇಪವೆತ್ತಿದ್ದಾರೆ.  ಮಹಿಳೆಯರು ಮತ್ತು ಗಣೇಶನ ವಿಗ್ರಹದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದರೆನ್ನಲಾದ ಅವರ ದಶಕಗಳಷ್ಟು ಹಳೆಯ ಟ್ವೀಟ್ ವೈರಲ್ ಆಗಿದೆ.

ತನ್ಮಯ್‌ ಭಟ್‌ರ ಹಳೆಯ ಟ್ವೀಟ್‌ಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಅನೇಕ ಟ್ವಿಟರ್‌ ಬಳೆಕದಾರರು ಕೋಟಕ್ ಬ್ಯಾಂಕ್ ಅನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿ, ಜಾಹಿರಾತನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಬಳಿಕ ಕೋಟಕ್ ಬ್ಯಾಂಕ್ ಜಾಹೀರಾತಿನಿಂದ ಭಟ್ ರನ್ನು ತೆಗೆದು ಹಾಕಿ ಜನರ ಕ್ಷಮೆ ಕೇಳಿದೆ.

"ನಾವು, ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ನಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಹಾನಿ ಮಾಡುವ ಅಥವಾ ಮಾನನಷ್ಟಗೊಳಿಸುವ ನಟರ ವೈಯಕ್ತಿಕ ನಿಲುವಿನ ದೃಷ್ಟಿಕೋನಗಳನ್ನು ಅನುಮೋದಿಸುವುದಿಲ್ಲ. ನಾವು ಅಭಿಯಾನವನ್ನು ಹಿಂಪಡೆದಿದ್ದೇವೆ.” ಎಂದು ಕೊಟಕ್‌ ಬ್ಯಾಂಕ್‌ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್‌ ಮಾಡಿದೆ.

ತನ್ಮಯ್‌ ಭಟ್‌ ಅವರು ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ, #MeToo ಚಳವಳಿಯ ಸಂದರ್ಭದಲ್ಲಿ, ಅವರ ಸಹೋದ್ಯೋಗಿ ತನ್ಮಯ್‌ ಭಟ್‌ ವಿರುದ್ಧ metoo ಆರೋಪ ಮಾಡಿದ್ದರು. 

Similar News