×
Ad

ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

ಇದು ಕೇಂದ್ರ ಸರಕಾರದ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಅಲ್ಲ !

Update: 2023-02-15 17:47 IST

ಮುಂಬೈ/ಬೆಂಗಳೂರು: ಕಾಂತಾರ ಚಿತ್ರದ ಮೂಲಕ ದೇಶ ವಿದೇಶಗಳ  ಸಿನಿಪ್ರೇಮಿಗಳ ಗಮನ ಸೆಳೆದಿರುವ ನಟ-ನಿರ್ದೇಶಕ ರಿಷಬ್‌ ಶೆಟ್ಟಿ ಅವರು ʼದಾದಾಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2023ʼ ರ ಅತ್ಯಂತ ಭರವಸೆಯ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

DPIFF (Dadasaheb Phalke International Film Festival) ಎಂಬ ಮುಂಬೈಯ ಖಾಸಗಿ ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಫೆ. 20 ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.  

ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರತಿವರ್ಷ ನೀಡುವ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ  ʼದಾದಾ ಸಾಹೇಬ್‌ ಫಾಲ್ಕೆʼ ಪ್ರಶಸ್ತಿ ಎಂದು ತಪ್ಪಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದೆ.

-----------------------------------------------------

ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ಅಧೀನದಲ್ಲಿ ಬರುವ  ಚಲನಚಿತ್ರ ನಿರ್ದೇಶನಾಲಯ  ಪ್ರತಿ ವರ್ಷ ರಾಷ್ಟ್ರೀಯ ಚಲನಚಿತ್ರ  ಪ್ರಶಸ್ತಿ ನೀಡುವಾಗ    ʼದಾದಾ ಸಾಹೇಬ್‌ ಫಾಲ್ಕೆʼ ಅವಾರ್ಡ್‌ ಅನ್ನು  ಪ್ರತಿ ವರ್ಷ ನೀಡುತ್ತದೆ. ಚಲನಚಿತ್ರರಂಗದಲ್ಲಿ ಜೀವಮಾನ ಶ್ರೇಷ್ಠ ಸಾಧನೆ ಮಾಡಿದ ದಿಗ್ಗಜ ಸಾಧಕರೊಬ್ಬರನ್ನು ಇದಕ್ಕೆ ಆಯ್ಕೆ ಮಾಡಲಾಗುತ್ತದೆ.   ಅಮಿತಾಭ್‌ ಬಚ್ಚನ್‌, ಡಾ. ರಾಜ್‌ಕುಮಾರ್‌, ರಜನಿಕಾಂತ್‌, ಆಶಾ ಪಾರೇಖ್‌, ಲತಾ ಮಂಗೇಶ್ಕರ್‌ ರಂತಹ ಚಿತ್ರರಂಗದ ಮಹಾ ಸಾಧಕರಿಗೆ ಈ ಪ್ರಶಸ್ತಿ ಸಂದಿದೆ.

Similar News