×
Ad

ಬಾಲ್ಯವಿವಾಹ ಪ್ರಕರಣಗಳಲ್ಲಿ 9 ಮಂದಿಗೆ ಜಾಮೀನು: ಇದರಲ್ಲಿ ಪೋಕ್ಸೊ ಅಪರಾಧ ಯಾವುದು ಎಂದು ಕೇಳಿದ ಗುವಾಹಟಿ ಹೈಕೋರ್ಟ್

Update: 2023-02-15 22:16 IST

ಗುವಾಹಟಿ, ಫೆ. 15: ಗುವಾಹಟಿ ಹೈಕೋರ್ಟ್(Gauhati High Court) ಮಂಗಳವಾರ ನಾಲ್ಕು ಬಾಲ್ಯವಿವಾಹ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಿದೆ ಹಾಗೂ ಈ ಪ್ರಕರಣಗಳಲ್ಲಿ, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಗಟ್ಟುವ ಕಾಯ್ದೆ (ಪೋಕ್ಸೊ)ಯಡಿ ಹೊರಿಸಿರುವ ಆರೋಪಗಳು ಸಮಂಜಸವಲ್ಲ ಎಂದು ಅದು ಹೇಳಿದೆ.

ಅಸ್ಸಾಮ್ (Assam)ಪೊಲೀಸರು ಫೆಬ್ರವರಿ 3ರಿಂದ ಬಾಲ್ಯವಿವಾಹಗಳ ವಿರುದ್ಧ ಕಾನೂನುಕ್ರಮ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಫೆಬ್ರವರಿ 12ರ ವೇಳೆಗೆ, ಪೋಕ್ಸೊ ಅಥವಾ ಬಾಲ್ಯವಿವಾಹ ತಡೆ ಕಾಯ್ದೆಯಡಿಯಲ್ಲಿ 3,000ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.

14 ವರ್ಷಕ್ಕಿಂತ ಕೆಳಗಿನ ಬಾಲಕಿಯರನ್ನು ಮದುವೆಯಾದ ಪುರುಷರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮತ್ತು 14 ಮತ್ತು 18 ವರ್ಷಗಳ ನಡುವಿನ ಬಾಲಕಿಯರನ್ನು ಮದುವೆಯಾದ ವ್ಯಕ್ತಿಗಳ ವಿರುದ್ಧ ಬಾಲ್ಯವಿವಾಹ ತಡೆ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ(Himanta Biswa Sarma) ಈಗಾಗಲೇ ಹೇಳಿದ್ದಾರೆ.

ಮಂಗಳವಾರ ನಡೆದ ವಿಚಾರಣೆಯ ವೇಳೆ, ಹೈಕೋರ್ಟ್ ಒಂಭತ್ತು ಮಂದಿಗೆ ಜಾಮೀನು ನೀಡಿದೆ.

ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಯಾಕೆ ಮೊಕದ್ದಮೆ ಹೂಡಲಾಯಿತು ಎನ್ನುವುದನ್ನು ವಿವರಿಸುವಂತೆ ನ್ಯಾ. ಸುಮನ್ ಶ್ಯಾಮ್(Suman Shyam) ಅಧಿಕಾರಿಗಳನ್ನು ಪ್ರಶ್ನಿಸಿದರು.

‘‘ಇಲ್ಲಿ ಪೋಕ್ಸೊ ಅಪರಾಧ ಏನಿದೆ? ಪೋಕ್ಸೊವನ್ನು ಸೇರಿಸಿದ ಮಾತ್ರಕ್ಕೆ, ಅಲ್ಲಿ ಏನಿದೆ ಎನ್ನುವುದನ್ನು ನ್ಯಾಯಾಧೀಶರು ನೋಡುವುದಿಲ್ಲ ಎಂದು ಭಾವಿಸಿದ್ದೀರಾ? ನಾವು ಇಲ್ಲಿ ಯಾರನ್ನೂ ದೋಷಮುಕ್ತಿಗೊಳಿಸುತ್ತಿಲ್ಲ. ತನಿಖೆ ಮಾಡುವುದರಿಂದ ನಿಮ್ಮನ್ನು ಯಾರೂ ತಡೆಯುತ್ತಿಲ್ಲ’’ ಎಂದು ನ್ಯಾಯಾಲಯ ಹೇಳಿತು.

Similar News