ದೇಶದ್ರೋಹದ ಪ್ರಕರಣ:‌ ಬಿಜೆಪಿ ಮುಖಂಡ ಹಾರ್ದಿಕ್ ಪಟೇಲ್ ವಿರುದ್ಧ ಬಂಧನಾದೇಶ ಜಾರಿ

Update: 2023-02-16 15:34 GMT

ಗಾಂಧಿನಗರ, ಫೆ. 16: ಸರಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ 2017ರ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮುಂದೆ ಹಾಜರಾಗಲು ವಿಫಲವಾದ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್(Hardik Patel) ಗೆ ಗುಜರಾತ್ ನ ಸುರೇಂದ್ರನಗರ್ ಜಿಲ್ಲೆಯ ನ್ಯಾಯಾಲಯ ಬಂಧನ ಆದೇಶ ಜಾರಿಗೊಳಿಸಿದೆ.

 2017ರ ಗುಜರಾತ್ ವಿಧಾನ ಸಭೆ ಚುನಾವಣೆಗೆ ಮುನ್ನ ಜಿಲ್ಲೆಯ ಗ್ರಾಮವೊಂದರಲ್ಲಿ ಸರಕಾರದ ಆದೇಶವನ್ನು ಉಲ್ಲಂಘಿಸಿ ಹಾರ್ದಿಕ್ ಪಟೇಲ್ ಅವರು ರಾಜಕೀಯ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲವಾದ ಹಾರ್ದಿಕ್ ಪಟೇಲ್ ವಿರುದ್ಧ ಧೃಂಗಾಧ್ರದ ಹೆಚ್ಚುವರಿ ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಡಿ.ಡಿ. ಶಾ ಅವರು ಬಂಧನಾದೇಶ ಜಾರಿಗೊಳಿಸಿದ್ದಾರೆ.

ಫೆಬ್ರವರಿ 2ರ ತನ್ನ ಆದೇಶದಂತೆ ಹಾರ್ದಿಕ್ ಪಟೇಲ್ ಅವರನ್ನು ಬಂಧಿಸುವಂತೆ ಹಾಗೂ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಧೃಂಗಾಧ್ರ ತಾಲೂಕು ಪೊಲೀಸ್ ಠಾಣೆಯ ಅಧಿಕಾರಿಗೆ ಅವರು ನಿರ್ದೇಶಿಸಿದ್ದಾರೆ. ಆದೇಶವನ್ನು ಫೆಬ್ರವರಿ 11ರಂದು ಪೊಲೀಸ್ ಠಾಣೆ ಸ್ವೀಕರಿಸಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. 

Similar News