ಟರ್ಕಿ: ಭೂಕಂಪ ಸಂತ್ರಸ್ತರಿದ್ದ ಮನೆಯಲ್ಲಿ ಬೆಂಕಿ; 7 ಮಂದಿ ಮೃತ್ಯು

Update: 2023-02-17 16:47 GMT

ಇಸ್ತಾನ್ಬುಲ್, ಫೆ.17: ಟರ್ಕಿಯಲ್ಲಿ ಕಳೆದ ವಾರ ಸಂಭವಿಸಿದ್ದ ಭೂಕಂಪದಲ್ಲಿ ಸಂತ್ರಸ್ತರಾಗಿದ್ದ ಸಿರಿಯಾದ ಕುಟುಂಬವೊಂದು ನೆಲೆಸಿದ್ದ ಮನೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಐವರು ಮಕ್ಕಳು ಹಾಗೂ ಅವರ ಹೆತ್ತವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಿರಿಯಾ ಮೂಲದ ಈ ಕುಟುಂಬ ಆಗ್ನೇಯ ಟರ್ಕಿಯ ನುರ್ಡಾಗಿ ನಗರದಲ್ಲಿ ನೆಲೆಸಿತ್ತು. ಇವರಿದ್ದ ಮನೆ ಭೂಕಂಪದಲ್ಲಿ ಹಾನಿಗೊಂಡ ಬಳಿಕ ಕುಟುಂಬವನ್ನು ಮಧ್ಯ ಟರ್ಕಿಯ ಕೊನ್ಯಾ ಪ್ರಾಂತಕ್ಕೆ ಸ್ಥಳಾಂತರಿಸಿ ಮನೆಯೊಂದರಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿತ್ತು. ಆದರೆ ಶುಕ್ರವಾರ ಮನೆಯಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 4ರಿಂದ 13 ವರ್ಷ ಪ್ರಾಯದ 5 ಮಕ್ಕಳು, ಅವರ ಹೆತ್ತವರು ಮೃತಪಟ್ಟಿದ್ದಾರೆ. ಬಾಲಕಿಯೊಬ್ಬಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈಕೆ ಅದೇ ಕುಟುಂಬದ ಸದಸ್ಯೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಟರ್ಕಿಯಲ್ಲಿ ಸುಮಾರು 4 ದಶಲಕ್ಷ ಸಿರಿಯನ್ ಪ್ರಜೆಗಳಿದ್ದಾರೆ.

ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ ಮಸೀದಿ ಧ್ವಂಸಗೊಳಿಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು; ವರದಿ

Similar News