×
Ad

ಪಂಜಾಬ್:‌ ಪತ್ನಿಯನ್ನು ಕೊಂದು, ಮನೆಯಲ್ಲೇ ಸುಡಲು ಯತ್ನಿಸಿದ್ದ ಆರೋಪಿ ಸೆರೆ

Update: 2023-02-17 21:15 IST

ಚಂಡಿಗಡ,ಫೆ.17: ತನ್ನ ಪತ್ನಿಯನ್ನು ಥಳಿಸಿ ಕೊಂದ ಬಳಿಕ ಮನೆಯಲ್ಲಿಯೇ ಅಂತ್ಯಸಂಸ್ಕಾರಕ್ಕೆ ಪ್ರಯತ್ನಿಸಿದ್ದ 60ರ ಹರೆಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಾಬಿನ ಗುರುದಾಸಪುರ ಜಿಲ್ಲೆಯ ದಿನಾನಗರದ ಪನಿಯಾರ್ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕನಾಗಿರುವ ಆರೋಪಿ ಸಂಸಾರಚಂದ್ತನ್ನ ಪತ್ನಿ ಮಹಿಂದ್ರೋ (55) ಜೊತೆಗೆ ಯಾವುದೋ ವಿಷಯದಲ್ಲಿ ಜಗಳವಾಡಿ ಆಕೆಯನ್ನು ಥಳಿಸಿದ್ದ. ಗಂಭೀರ ಗಾಯಗಳಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು. ಕಟ್ಟಿಗೆಯನ್ನು ಸಂಗ್ರಹಿಸಿ ತಂದಿದ್ದ ಸಂಸಾರಚಂದ್ ಮನೆಯಲ್ಲಿಯೇ ಆಕೆಯ ಅಂತ್ಯಸಂಸ್ಕಾರ ನಡೆಸಲು ಪ್ರಯತ್ನಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ದಂಪತಿಯ ಪುತ್ರ ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ.ಶಂಕಿತ ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಅರೆಬೆಂದಿದ್ದ ಶವವನ್ನು ಹೊರಕ್ಕೆ ತೆಗೆದಿದ್ದರು.

ಸಂಸಾರಚಂದ್ ಆಗಾಗ್ಗೆ ತನ್ನ ಪತ್ನಿಯೊಡನೆ ಜಗಳವಾಡುತ್ತಿದ್ದ ಮತ್ತು ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.

Similar News