×
Ad

ಸೌದಿ ಅರೇಬಿಯಾದಲ್ಲಿ 4.1 ತೀವ್ರತೆಯ ಭೂಕಂಪನ: ವರದಿ

Update: 2023-02-19 22:30 IST

ರಿಯಾದ್: ಸೌದಿ ಅರೇಬಿಯಾದ ಆಗ್ನೇಯ ಭಾಗದಲ್ಲಿ ಭೂಮಿಯ 16 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಿಸಿದ್ದಾಗಿ ಸೌದಿ ಭೂವಿಜ್ಞಾನ ಸಮೀಕ್ಷೆಯ (SGS) ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ನೆಟ್‌ವರ್ಕ್ ತಿಳಿಸಿದೆ ಎಂದು saudigazette.com.sa ವರದಿ ಮಾಡಿದೆ.

ರವಿವಾರ ಬೆಳಗ್ಗೆ 7:55 ಗಂಟೆಗೆ ಭೂಕಂಪನದ ಕುರಿತು ಮಾನಿಟರ್ ನಡೆಸಲಾಯಿತು ಎಂದು ಎಸ್‌ಜಿಎಸ್ ತಿಳಿಸಿದೆ.

ಸೌದಿ ಭೂವೈಜ್ಞಾನಿಕ ಸಮೀಕ್ಷೆಯ (SCS) ಅಧಿಕೃತ ವಕ್ತಾರ ತಾರಿಕ್ ಅಬಾ ಅಲ್-ಖೈಲ್ ಅವರು ಒಮಾನ್ ಸುಲ್ತಾನೇಟ್‌ನ ಪೂರ್ವ ಭಾಗದಲ್ಲಿ ಸೌದಿ ಗಡಿಯಿಂದ ಸುಮಾರು 240 ಕಿ.ಮೀ ದೂರದಲ್ಲಿ ಭೂಕಂಪನ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಭೂಕಂಪನದಿಂದ ಸೌದಿ ಅರೇಬಿಯಾದ ಭೂಮಿಯಲ್ಲಿ ಯಾವುದೇ ಪರಿಣಾಮ ಅಥವಾ ಅಪಾಯ ಉಂಟಾಗಿಲ್ಲ. ಭೂಕಂಪನ ನಡೆದ ಸ್ಥಳ ಜನನಿವಾಸ ಪ್ರದೇಶದಿಂದ ತುಂಬಾ ದೂರವಿದೆ ಎಂದು ಅಬಾ ಅಲ್-ಖೈಲ್ ಭೂಕಂಪನ ತೀವ್ರತೆಯ ಫಲಿತಾಂಶಗಳ ಆಧಾರದ ಮೇಲೆ ಮಾಹಿತಿ ನೀಡಿದರು. SGS ಭೂಕಂಪನಗಳನ್ನು ನಿಗಾವಿರಿಸಿ ಮೇಲ್ವಿಚಾರಣೆ ಮಾಡುತ್ತಿದೆ. ಅವುಗಳನ್ನು ವಿಶ್ಲೇಷಿಸಲು ಮತ್ತು ಭೂಕಂಪನ ಚಟುವಟಿಕೆಯ ಮೂಲಗಳು ಮತ್ತು ವ್ಯಾಪ್ತಿಯನ್ನು ನಿರ್ಧರಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

Similar News