×
Ad

ನೀತಿ ಆಯೋಗದ ನೂತನ ಸಿಇಒ ಆಗಿ ನಿಯೋಜನೆಗೊಂಡ ಬಿವಿಆರ್ ಸುಬ್ರಹ್ಮಣ್ಯಂ

Update: 2023-02-20 21:43 IST

ಹೊಸದಿಲ್ಲಿ: ನೀತಿ (NITI) ಆಯೋಗದ ಸಿಇಒ ಆಗಿ ಬಿವಿಆರ್ ಸುಬ್ರಹ್ಮಣ್ಯಂ ಅವರನ್ನು ನೇಮಕ ಮಾಡಲು ಸರ್ಕಾರ ಸೋಮವಾರ ಅನುಮೋದನೆ ನೀಡಿದೆ.

ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡು ಅಮೇರಿಕಾಗೆ ತೆರಳಲಿರುವ ಪರಮೇಶ್ವರನ್ ಲೈಯರ್ ಅವರ ಸ್ಥಾನವನ್ನು ಸುಬ್ರಹ್ಮಣ್ಯಂ ಅವರು ವಹಿಸಿಕೊಳ್ಳಲಿದ್ದಾರೆ.

ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಸುಬ್ರಹ್ಮಣ್ಯಂ ಅವರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರದ ನಿರ್ಧಾರದ ಬಗ್ಗೆ ತಿಳಿದಿದ್ದ ಕೆಲವೇ ಅಧಿಕಾರಿಗಳಲ್ಲಿ ಒಬ್ಬರು ಎಂದು ಹೇಳಲಾಗಿದೆ.

ಛತ್ತೀಸ್‌ಗಢ ಕೇಡರ್‌ನ 1987-ಬ್ಯಾಚ್‌ನ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯಂ ಅವರು, 2004 ರಿಂದ 2008 ರವರೆಗೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Similar News