×
Ad

ಪಾಕಿಸ್ತಾನ: ಕಮರಿಗೆ ಉರುಳಿದ ಬಸ್ಸು; 15 ಮಂದಿ ಮೃತ್ಯು, 60 ಮಂದಿಗೆ ಗಾಯ

Update: 2023-02-20 23:05 IST

ಲಾಹೋರ್, ಫೆ.20: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಮದುವೆಗೆ ತೆರಳುತ್ತಿದ್ದವರು ಪ್ರಯಾಣಿಸುತ್ತಿದ್ದ ಬಸ್ಸೊಂದು ಕಮರಿಗೆ ಉರುಳಿಬಿದ್ದು ಕನಿಷ್ಟ 15 ಮಂದಿ ಮೃತಪಟ್ಟಿದ್ದಾರೆ. ಬಸ್ಸಿನಲ್ಲಿದ್ದ 60 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ಇಸ್ಲಮಾಬಾದ್‌ನಿಂದ ಲಾಹೋರ್ ಗೆ ಸಂಚರಿಸುತ್ತಿದ್ದ ಬಸ್ಸು ಪಂಜಾಬ್ ನ ಕಲ್ಲಾರ್ಕಹರ್ ಸಾಲ್ಟ್ರೇಂಜ್ ಪ್ರದೇಶದಲ್ಲಿ ರವಿವಾರ ತಡರಾತ್ರಿ ರಸ್ತೆ ಪಕ್ಕದ ಕಮರಿಗೆ ಉರುಳಿಬಿದ್ದು ಈ ಅಪಘಾತ ಸಂಭವಿಸಿದೆ. ಮದುವೆ ಮುಗಿಸಿ ಹಿಂತಿರುಗುತ್ತಿದ್ದವರು ಇದ್ದ ಈ ಬಸ್ಸಿನ ಬ್ರೇಕ್ಫೈಲ್ ಆಗಿರುವುದು  ಅಪಘಾತಕ್ಕೆ ಕಾರಣ . 15 ಪ್ರಯಾಣಿಕರು ಮೃತಪಟ್ಟಿದ್ದು ಗಾಯಗೊಂಡವರಲ್ಲಿ 11 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಭೀಕರ ದುರಂತದ ಬಗ್ಗೆ ಪಾಕ್ ಪ್ರಧಾನಿ ಶಹಬಾಝ್ ಶರೀಫ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

Similar News