×
Ad

ಮೇಘಾಲಯ: ಯುಡಿಪಿ ಅಭ್ಯರ್ಥಿ ನಿಧನ; ಚುನಾವಣೆ ಪ್ರಕ್ರಿಯೆ ಮುಂದೂಡುವ ಸಾಧ್ಯತೆ

Update: 2023-02-21 11:00 IST

ಶಿಲ್ಲಾಂಗ್ (ಪಿಟಿಐ): ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೋಹಿಯಾಂಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಯುನೈಟೆಡ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಎಫ್‌ಆರ್ ಖಾರ್ಕೊಂಗೊರ್ ಸೋಮವಾರ ತಿಳಿಸಿದ್ದಾರೆ.

60 ಸದಸ್ಯ ಬಲದ ಸದನಕ್ಕೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.

"ಸೋಹಿಯಾಂಗ್ ಕ್ಷೇತ್ರದ ಅಭ್ಯರ್ಥಿ ಎಚ್‌ಡಿಆರ್ ಲಿಂಗ್ಡೋಹ್ ಅವರು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಕ್ಷೇತ್ರದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡುವ ಸಾಧ್ಯತೆಯಿದೆ" ಎಂದು ಖಾರ್ಕೊಂಗೊರ್ ಪಿಟಿಐಗೆ ತಿಳಿಸಿದರು.

ರಾಜ್ಯದ ಮಾಜಿ ಗೃಹ ಸಚಿವರಾಗಿದ್ದ ಲಿಂಗ್ಡೋಹ್ ಅವರು ಕಳೆದ ಚುನಾವಣೆಯಲ್ಲಿ ಹಿಲ್ಸ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಸ್ಯಾಮ್ಲಿನ್ ಮಲ್ಂಗಿಯಾಂಗ್ ವಿರುದ್ಧ ಸೋತಿದ್ದರು.

Similar News