×
Ad

ಮಣಿಪಾಲ: ಡ್ರಗ್ಸ್, ಗಾಂಜಾ ಮಾರಾಟ; ಓರ್ವನ ಬಂಧನ

Update: 2023-02-22 22:05 IST

ಮಣಿಪಾಲ : ಸ್ಕೂಟರ್‌ನಲ್ಲಿ ಮಾದಕ ವಸ್ತು ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಮಣಿಪಾಲ ಪೊಲೀಸರು ಫೆ.21ರಂದು ಬೆಳಗ್ಗೆ ಮಣಿಪಾಲದ ಆರ್‌ಟಿಓ ಕಚೇರಿ ಬಳಿ ಬಂಧಿಸಿದ್ದಾರೆ.

ಉಡುಪಿ ಕೊರಂಗ್ರಪಾಡಿಯ ಇಕ್ಬಾಲ್ ಶೇಕ್ (32) ಬಂಧಿತ ಆರೋಪಿ. ಈತನ ವಶದಲ್ಲಿದ್ದ ಗಾಂಜಾ, ಎಂಡಿಎಂಎ, ಮೊಬೈಲ್ ಫೋನ್, ವೈಫೈ ರೂಟರ್, ಸ್ಕೂಟರ್ ಹಾಗೂ ನಗದು ಹಣವನ್ನು ವಶಪಡಿಸಿ ಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 44,700ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News