×
Ad

BSNL ನಿಂದ ರಿಲಯನ್ಸ್ ಜಿಯೋಗೆ ಸಿಮ್ ಪೋರ್ಟ್ ಮಾಡಲು ಕರ್ನಾಟಕ ರಾಜ್ಯ ಪೊಲೀಸರ ನಿರ್ಧಾರ: ವರದಿ

Update: 2023-02-23 12:13 IST

ಹೊಸದಿಲ್ಲಿ: ಕರ್ನಾಟಕ ರಾಜ್ಯ ಪೊಲೀಸರು ತಮ್ಮ ಎಲ್ಲಾ 38,000  ಅಧಿಕೃತ ಮೊಬೈಲ್ ಫೋನ್ ಸಿಮ್ ಕಾರ್ಡ್‌ಗಳನ್ನು ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನೆಟ್ ವರ್ಕ್ ನಿಂದ ರಿಲಯನ್ಸ್ ಜಿಯೋಗೆ ಬದಲಾಯಿಸಲು ನಿರ್ಧರಿಸಿದ್ದಾರೆ. ಇದು ಮುಖ್ಯವಾಗಿ ಬಿಎಸ್ಸೆನ್ನೆಲ್ ಉದ್ಯೋಗಿಗಳ ಒಕ್ಕೂಟ ಸೇರಿದಂತೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ ಎಂದು Thehindu.com ವರದಿ ಮಾಡಿದೆ. 

BSNL ನಿಂದ Reliance Jio ಗೆ ಸೇವಾ ಪೂರೈಕೆದಾರರನ್ನು ಬದಲಾಯಿಸಲು ಸರಕಾರದ ಅನುಮೋದನೆ ನಿಡಿದೆ.  ಈ ಕುರಿತು  ಎಲ್ಲಾ ಘಟಕಗಳ ಮುಖ್ಯಸ್ಥರಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ.

"ಪೊಲೀಸರಂತಹ ತುರ್ತು ಸೇವೆಗಾಗಿ ಲಭ್ಯವಿರುವ ನೆಟ್‌ವರ್ಕ್‌ನ ದಕ್ಷತೆಯನ್ನು ಹೆಚ್ಚಿಸಲು ಇದು ಸಂಪೂರ್ಣವಾಗಿ ವಾಣಿಜ್ಯ ದೃಷ್ಟಿಕೋನದ ನಿರ್ಧಾರವಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

“ಈ 38,000 ಬಳಕೆದಾರರಲ್ಲಿ ಹೆಚ್ಚಿನವು ದೂರದ ಗ್ರಾಮೀಣ ಪ್ರದೇಶಗಳಲ್ಲಿವೆ, ಅಲ್ಲಿ ಅಧಿಕಾರಿಗಳು ಉತ್ತಮ ನೆಟ್‌ವರ್ಕ್ ಸಿಗುತ್ತಿಲ್ಲ ಎಂದು  ದೂರಿದ್ದಾರೆ. ಇಂದಿನ ದಿನಗಳಲ್ಲಿ ಪೊಲೀಸರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸ್ಥಳಗಳು, ಫೋಟೋಗಳು ಹಾಗೂ  ವೀಡಿಯೊಗಳನ್ನು ಒಳಗೊಂಡಂತೆ ಡೇಟಾವನ್ನು ವರ್ಗಾಯಿಸಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ಸೇವಾ ಪೂರೈಕೆದಾರರ ಡೇಟಾ ವೇಗವು ಶೋಚನೀಯವಾಗಿದೆ. ಖಾಸಗಿ ಸಂಸ್ಥೆಗಳು 5G ಸೇವೆಗಳನ್ನು ನೀಡುತ್ತಿದ್ದರೆ, BSNL ಇನ್ನೂ 4G ಸೇವೆಗಳನ್ನು ನೀಡುತ್ತಿಲ್ಲ. ನಮ್ಮಂತಹವರ  ತುರ್ತು ಸೇವೆಗೆ ಇದು ಕುಂಠಿತವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಆದಾಗ್ಯೂ, ಈ ನಿರ್ಧಾರವು ತನ್ನ ಸ್ವಂತ BSNL ನ್ನು ಕಡೆಗಣಿಸಿ  ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋವನ್ನು ಉತ್ತೇಜಿಸುವ ಇತ್ತೀಚಿನ ಹೊಸ ಉದಾಹರಣೆ ಇದಾಗಿದೆ ಎಂದು BSNL ನೌಕರರ ಸಂಘ ಆರೋಪಿಸಿದೆ.

Similar News