ಶಾಲಾ ಗ್ರಂಥಾಲಯಗಳಲ್ಲಿ ಪ್ರಧಾನಿ ಮೋದಿಯ 'ಎಕ್ಸಾಂ ವಾರಿಯರ್ಸ್‌' ಕೃತಿ ಲಭ್ಯ ಇರಬೇಕು: ರಾಜ್ಯಗಳಿಗೆ ಸೂಚನೆ

Update: 2023-02-23 07:57 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ’ಎಕ್ಸಾಂ ವಾರಿಯರ್ಸ್‌’ ಕೃತಿ ಎಲ್ಲ ಶಾಲಾ ಗ್ರಂಥಾಲಯಗಳಲ್ಲಿ ಲಭ್ಯ ಇರಬೇಕು ಎಂದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ ಎಂದು timesofindia ವರದಿ ಮಾಡಿದೆ.

"ಸಮಗ್ರ ಶಿಕ್ಷಾ ಯೋಜನೆಯಡಿಯ ಎಲ್ಲ ಶಾಲೆಗಳ ಗ್ರಂಥಾಲಯಗಳಲ್ಲಿ ಪ್ರಧಾನಿಯವರ ಈ ಕೃತಿ ಲಭ್ಯವಿರುವಂತೆ ಮಾಡಬೇಕು. ಈ ಮೂಲಕ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಪ್ರಧಾನಿ ನರೇಂದ್ರ ಮೋದಿಯವರರ ಜ್ಞಾನ ಭಂಡಾರದಿಂದ ಪ್ರಯೋಜನ ಪಡೆಯುವಂತಾಗಬೇಕು" ಎಂದು ಕೇಂದ್ರ ಶಿಕ್ಷಣ ಸಚಿವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

Similar News