×
Ad

ಮಾರುಕಟ್ಟೆ ಬಂಡವಾಳೀಕರಣ ರ‍್ಯಾಂಕಿಂಗ್​ನಲ್ಲಿ ಕುಸಿತ ಕಂಡ ಭಾರತ

Update: 2023-02-23 14:47 IST

ಹೊಸದಿಲ್ಲಿ: ಮಾರುಕಟ್ಟೆ ಬಂಡವಾಳೀಕರಣದಲ್ಲಿ ಭಾರತವು ಅಗ್ರ 10 ದೇಶಗಳ ಪೈಕಿ 2023 ರಲ್ಲಿ ಅತ್ಯಂತ ಕಳಪೆ ನಿರ್ವಹಣೆ ತೋರಿದ ದೇಶವಾಗಿದೆ. ಹಿಂಡೆನ್‌ಬರ್ಗ್‌ ವರದಿಯ ಹಿನ್ನೆಲೆಯಲ್ಲಿ ಅದಾನಿ ಸಮೂಹದ ಷೇರು ಬೆಲೆಗಳಲ್ಲಿ ಕುಸಿತವೂ ಇದಕ್ಕೆ ಒಂದು ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು thewire.in ವರದಿ ಮಾಡಿದೆ.

ಭಾರತ ಈಗ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ ಇಂಗ್ಲೆಂಡ್‌ ಆರನೇ ಸ್ಥಾನದಲ್ಲಿದೆ. ಮಾರ್ಚ್‌ 2022 ರಲ್ಲಿ ಭಾರತ ಇಂಗ್ಲೆಂಡ್‌, ಕೆನಡಾ ಮತ್ತು ಸೌದಿ ಅರೇಬಿಯಾ ದೇಶಗಳನ್ನು ಹಿಂದಿಕ್ಕಿ ಅಗ್ರ ಐದು ಪಟ್ಟಿಯಲ್ಲಿತ್ತು.

ಜನವರಿ 31 ರಂದು  ಫ್ರಾನ್ಸ್‌ ಐದನೇ ಸ್ಥಾನದಲ್ಲಿದ್ದರೆ ಇಂಗ್ಲೆಂಡ್‌ ಆರನೇ ಸ್ಥಾನದಲ್ಲಿತ್ತು. ಫ್ರಾನ್ಸ್‌ಗಿಂತ ಮೇಲಿನ ಸ್ಥಾನಗಳಲ್ಲಿ ಅಮೆರಿಕಾ, ಚೀನಾ, ಜಪಾನ್‌ ಮತ್ತು ಹಾಂಕಾಂಗ್‌ ಇದೆ. ಅಗ್ರ 10 ದೇಶಗಳ ಪಟ್ಟಿಯಲ್ಲಿ ಭಾರತದ ಸ್ಟಾಕ್‌ ಮಾರ್ಕೆಟ್‌ ಅತ್ಯಂತ ಕಳಪೆ ನಿರ್ವಹಣೆ ತೋರಿದೆ.

ವರದಿಯೊಂದರ ಪ್ರಕಾರ ಭಾರತದ ಮಾರುಕಟ್ಟೆ ಬಂಡವಾಳೀಕರಣವು  231 ಬಿಲಿಯನ್‌ ಡಾಲರ್‌ನಷ್ಟು ಅಥವಾ ಶೇ 6.93 ರಷ್ಟು ಕಡಿಮೆಯಾಗಿ 3.1 ಟ್ರಿಲಿಯನ್‌ ಡಾಲರ್‌ ಆಗಿದೆ.

ಶೇ. 60 ಕ್ಕಿಂತ ಹೆಚ್ಚಿನ ನಷ್ಟಗಳು ಅದಾನಿ ಸಮೂಹದಿಂದಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದಲಿತರ ವಿವಾಹಕ್ಕೆ ಅಡ್ಡಿಪಡಿಸಿದ 'ಬಾಗೇಶ್ವರ್ ಬಾಬಾ' ಸಹೋದರನ ವಿರುದ್ಧ ಪ್ರಕರಣ ದಾಖಲು

Similar News