ಪವನ್ ಖೇರಾರನ್ನು ವಿಮಾನದಿಂದ ಕೆಳಗಿಳಿಸಿ, ಬಂಧನ:ಸುಪ್ರೀಂ ಕೋರ್ಟ್‌ ಮೊರೆ ಹೋದ ಕಾಂಗ್ರೆಸ್

Update: 2023-02-23 10:09 GMT

ಹೊಸದಿಲ್ಲಿ: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ತೆರಳಲು ಸಿದ್ದವಾಗಿದ್ದ ವಿಮಾನದಿಂದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ಕೆಳಗಿಳಿಳಿಸಿದ ಅಸ್ಸಾಂ ಪೊಲೀಸರು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂಧಿಸಿದ್ದಾರೆ. ಪ್ರಧಾನಿ ಮೋದಿಗೆ ಅವಮಾನಿಸಿದ ಆರೋಪದಲ್ಲಿ ಖೇರಾ ಅವರ ಬಂಧಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಎಂದು NDTV ವರದಿ ಮಾಡಿದೆ.

ಕಾಂಗ್ರೆಸ್ ಹಿರಿಯ ವಕ್ತಾರ ಪವನ್ ಖೇರಾ ಅವರನ್ನು ಇಂಡಿಗೋ ವಿಮಾನದಿಂದ ಒತ್ತಾಯ ಪೂರ್ವಕವಾಗಿ ಕೆಳಗಿಳಿಸಲಾಗಿದ್ದು  ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸಭೆಗಾಗಿ ರಾಯಪುರಕ್ಕೆ ಕಾಂಗ್ರೆಸ್ ನಾಯಕರ ದೊಡ್ಡ ಗುಂಪಿನೊಂದಿಗೆ ತೆರಳುತ್ತಿದ್ದರು.

ಪ್ರಧಾನಿ ಮೋದಿಗೆ ಅವಮಾನಿಸಿದ ಆರೋಪದಲ್ಲಿ ಖೇರಾ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ಕದ ತಟ್ಟಲು ಚಿಂತನೆ ನಡೆಸಿದೆ ಎಂದು NDTV ವರದಿ ಮಾಡಿದೆ.

ಎಫ್‌ಐಆರ್ ಅಥವಾ ಪ್ರಥಮ ಮಾಹಿತಿ ವರದಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅಸ್ಸಾಂ ಪೊಲೀಸರು ಪವನ್ ಖೇರಾ ಅವರನ್ನು ಬಂಧಿಸಿದ್ದಾರೆ.

"ಇದು ಸುದೀರ್ಘ ಯುದ್ಧ ಹಾಗೂ  ನಾನು ಹೋರಾಡಲು ಸಿದ್ಧ" ಎಂದು  ಪೊಲೀಸರಿಂದ ಬಂಧಿಸಲಟ್ಟಾಗ ಖೇರಾ ಹೇಳಿದರು.

"ಬಿಜೆಪಿ ಭಯದಿಂದ ವರ್ತಿಸುತ್ತಿದೆ. ರಾಹುಲ್ ಗಾಂಧಿಯವರ ಯಶಸ್ವಿ 'ಭಾರತ್ ಜೋಡೋ ಯಾತ್ರೆ'ಯ ಕಾರಣದಿಂದಾಗಿ ಪಕ್ಷದ ಸರ್ವಸದಸ್ಯ ಅಧಿವೇಶನವನ್ನು ತಡೆಯಲು ಬಯಸಿದೆ. ಕಳೆದ ವಾರ ಜಾರಿ ನಿರ್ದೇಶನಾಲಯವು(ಈಡಿ) ಛತ್ತೀಸ್‌ಗಢದ ಕಾಂಗ್ರೆಸ್ ಶಾಸಕರ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಶೋಧ ನಡೆಸಿತ್ತು''ಎಂದು ಕಾಂಗ್ರೆಸ್ ತಿಳಿಸಿದೆ.

Similar News