ರಾಜಸ್ಥಾನ:‌ ಹದಿನೇಳು ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ

Update: 2023-02-24 14:56 GMT

ಕೋಟಾ (ರಾಜಸ್ಥಾನ), ಫೆ. 24: ಹದಿನೇಳು ವರ್ಷದ ನೀಟ್ ಆಕಾಂಕ್ಷಿಯೋರ್ವ ಇಲ್ಲಿನ ಹಾಸ್ಟೆಲ್ ಕೊಠಡಿಯೊಂದರಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಶರಣಾದ ನೀಟ್ ಆಕಾಂಕ್ಷಿಯನ್ನು ಅಭಿಷೇಕ್ ಯಾದವ್ ಎಂದು ಗುರುತಿಸಲಾಗಿದೆ. ಈತ ಉತ್ತರಪ್ರದೇಶದ ಬಡೌನ್ ಜಿಲ್ಲೆಯ ನಿವಾಸಿ. ಈತ ಕೋಟಾದಲ್ಲಿ ಈ ವರ್ಷ ಆತ್ಮಹತ್ಯೆಗೆ ಶರಣಾಗುತ್ತಿರುವ ನಾಲ್ಕನೇ ವಿದ್ಯಾರ್ಥಿ.

ಅಭಿಷೇಕ್ ಯಾದವ್ ಕಳೆದ ಎರಡು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ಹಾಗೂ ತರಬೇತಿ ಕೇಂದ್ರವೊಂದರಲ್ಲಿ ನೀಟ್ಗೆ ಕೋಚಿಂಗ್ ಪಡೆಯುತ್ತಿದ್ದ. ಕಳೆದ ಕೆಲವು ದಿನಗಳಿಂದ ಅಭಿಷೇಕ್ ಯಾದವ್ ಕೋಚಿಂಗ್ ಕ್ಲಾಸ್ಗೆ ಹಾಜರಾಗುತ್ತಿಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸ್ಟೆಲ್ ಕೊಠಡಿಯಲ್ಲಿ ಪತ್ತೆಯಾದ ಸುಸೈಡ್ ನೋಟ್ನಲ್ಲಿ ‘‘ತಾನು ಓದಿನ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದೇನೆ’’ಎಂದು ಆತ ಹೇಳಿದ್ದಾನೆ. ಅಲ್ಲದೆ, ಹೆತ್ತವರ ಕ್ಷಮೆ ಕೋರಿದ್ದಾನೆ ಎಂದು ಕುಲ್ಹರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಗಂಗಾ ಸಹಾಯ್ ಶರ್ಮಾ ತಿಳಿಸಿದ್ದಾರೆ.

Similar News