ಛತ್ತೀಸ್‌ಗಢದಲ್ಲಿ ನಕ್ಸಲರೊಂದಿಗಿನ ಎನ್‌ಕೌಂಟರ್: ಮೂವರು ಭದ್ರತಾ ಸಿಬ್ಬಂದಿ ಮೃತ್ಯು
Update: 2023-02-25 13:08 IST
ರಾಯ್ಪುರ: ಭದ್ರತಾ ಸಿಬ್ಬಂದಿಗಳು ಹಾಗೂ ನಕ್ಸಲರ ನಡುವೆ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಜವಾನರು ಸಾವನ್ನಪ್ಪಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು India Today ವರದಿ ಮಾಡಿದೆ.
ಛತ್ತೀಸ್‌ಗಢದ ಕುಂದೆ ಹಾಗೂ ಜಾಗರಗುಂಡ ನಡುವೆ ಎನ್‌ಕೌಂಟರ್ ನಡೆದಿದೆ. ನಕ್ಸಲೀಯರು ಹೊಂಚು ದಾಳಿಗೆ ಯೋಜನೆ ಹಾಕಿದ್ದರು. ಬೆಳಗ್ಗೆ 8.30ಕ್ಕೆ ಎನ್‌ಕೌಂಟರ್ ಆರಂಭವಾಯಿತು ಎಂದು ವರದಿಯಾಗಿದೆ.